Karnataka Assembly Polls: ಚಿತ್ರದುರ್ಗ ಸಮಾವೇಶದಲ್ಲಿ ಮಾತಾಡುವ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮಟೆ ಬಾರಿಸಿದರು!

|

Updated on: May 02, 2023 | 12:41 PM

ಕಾರ್ಯಕರ್ತರೊಬ್ಬರು ತಮಟೆ ತಂದುಕೊಟ್ಟಾಗ ಅವರು ಪ್ರಸನ್ನಚಿತ್ತರಾಗಿ ಅದನ್ನು ಹೆಗಲಿಗೇರಿಸಿಕೊಂಡು ಬಾರಿಸಲಾರಂಭಿಸುತ್ತಾರೆ.

ಚಿತ್ರದುರ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮಟೆಯಾಗಲೀ (drum), ಡೊಳ್ಳಾಗಲೀ ಅಥವಾ ಆಯಾ ಪ್ರದೇಶಗಳ ಸಾಂಪ್ರದಾಯಿಕ ವಾದ್ಯಗಳಾಗಲೀ-ನುರಿತವರಂತೆ ಬಾರಿಸುತ್ತಾರೆ, ನುಡಿಸುತ್ತಾರೆ. ಚಿತ್ರದುರ್ಗದಲ್ಲಿ ಅವರು ಇಂದು ತಮಟೆಯನ್ನು ಬಾರಿಸಿದರು. ಅವರು ಬಾರಿಸುವ ಶೈಲಿ ನೋಡಿದರೆ ಮೊದಲಬಾರಿಗೆ ಬಾರಿಸುತ್ತಿದ್ದಾರೆ ಅಂತ ಅನಿಸದು. ಕಾರ್ಯಕರ್ತರೊಬ್ಬರು ತಮಟೆ ತಂದುಕೊಟ್ಟಾಗ ಅವರು ಪ್ರಸನ್ನಚಿತ್ತರಾಗಿ ಅದನ್ನು ಹೆಗಲಿಗೇರಿಸಿಕೊಂಡು ಬಾರಿಸಲಾರಂಭಿಸುತ್ತಾರೆ. ಅದಕ್ಕೂ ಮೊದಲು ಪ್ರಧಾನಿಯವರನ್ನು ಶೇಂಗಾದಿಂದ ತಯಾರಿಸಿದ ಪೇಟ ತೊಡಿಸಿ ಸನ್ಮಾನಿಸಿ ಮದಕರಿ ನಾಯಕನ (Madakari Nayak) ಪ್ರತಿಮೆ ನೀಡಿ ಗೌರವಿಸಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 02, 2023 12:41 PM