ಸೈಪ್ರಸ್ನ ಐತಿಹಾಸಿಕ ಭೇಟಿ ಮುಗಿಸಿ ಕೆನಡಾಕ್ಕೆ ಹೊರಟ ಭಾರತದ ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ಮೋದಿ ಅವರು ಸೈಪ್ರಸ್‌ಗೆ ಐತಿಹಾಸಿಕ ಭೇಟಿಯನ್ನು ಮುಕ್ತಾಯಗೊಳಿಸಿದರು. ಇಂದು ಸಂಜೆ ಅವರು G7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾಕ್ಕೆ ತೆರಳಿದರು. ಜೂನ್ 15-16ರಂದು ನಡೆದ ಭೇಟಿಯು ಎರಡು ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಸೈಪ್ರಸ್‌ಗೆ ನೀಡಿದ ಮೊದಲ ಭೇಟಿಯಾಗಿತ್ತು. ಇದು ಮೆಡಿಟರೇನಿಯನ್ ಪ್ರದೇಶ ಮತ್ತು ಯುರೋಪಿಯನ್ ಒಕ್ಕೂಟದಲ್ಲಿ ಪ್ರಮುಖ ಪಾಲುದಾರ ನಿಕೋಸಿಯಾ ಜೊತೆಗಿನ ನವದೆಹಲಿಯ ಸಂಬಂಧವನ್ನು ಬೃಹತ್ ಪ್ರಮಾಣದಲ್ಲಿ ಬಲಪಡಿಸಿತು.
ನಿಕೋಸಿಯಾ, ಜೂನ್ 16: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ತಮ್ಮ ಎರಡು ದಿನಗಳ ಸೈಪ್ರಸ್ (Cyprus) ಭೇಟಿಯನ್ನು ಮುಗಿಸಿ ಕೆನಡಾಕ್ಕೆ ತೆರಳಿದರು. ಕೆನಡಾದಲ್ಲಿ ಅವರು ನಾಳೆ (ಮಂಗಳವಾರ) ಆಲ್ಬರ್ಟಾದ ಕನನಾಸ್ಕಿಸ್‌ನಲ್ಲಿ ನಡೆಯಲಿರುವ 51ನೇ G7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಾನುವಾರ ಪ್ರಧಾನಿ ಮೋದಿ ಸೈಪ್ರಸ್‌ಗೆ ಆಗಮಿಸಿದ್ದರು. ಇದು ಕಳೆದ ಎರಡು ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಸೈಪ್ರಸ್‌ಗೆ ನೀಡಿದ ಮೊದಲ ಭೇಟಿಯಾಗಿದೆ. ಪ್ರಧಾನಿ ಮೋದಿಯ ಸೈಪ್ರಸ್ ಭೇಟಿಯ ಹೈಲೈಟ್ಸ್ ವಿಡಿಯೋ ಇಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos