ಬೆಳಗಾವಿಯ ಬಿಜೆಪಿ ಸಮಾವೇಶದಲ್ಲಿ ಗಿಫ್ಟ್ ನೋಡಿ ಭಾವುಕರಾದ ಮೋದಿ, ವಿಡಿಯೋ ನೋಡಿ

Updated on: Apr 28, 2024 | 12:09 PM

ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮೋದಿ ಅವರಿಗೆ ಅವರ ತಾಯಿಯ ಫೋಟೋ ಇರುವ ಫ್ರೇಮ್​ವೊಂದನ್ನು ಗಿಫ್ಟ್​ ಆಗಿ ನೀಡಲಾಯ್ತು. ಈ ವೇಳೆ ಮೋದಿ ತಮ್ಮ ತಾಯಿ ಫೋಟೋ ನೋಡುತ್ತಿದ್ದಂತೆಯೇ ಕೊಂಚ ಭಾವುಕರಾದರು.

ಬೆಳಗಾವಿ, (ಏಪ್ರಿಲ್ 28): ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ (Loksabha Elections 2024) ಕಾವು ದಿನದಿಂದ ದಿನಕ್ಕೆ ರಂಗೇರಿದೆ. ಈಗಾಗಲೇ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ಮುಗಿದಿದ್ದು, ಇನ್ನುಳಿದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಕರ್ನಾಟಕ್ಕಕೆ ಆಗಮಿಸಿದ್ದು, ಇಂದು ಮೊದಲಿಗೆ ಬೆಳಗಾವಿಯಿಂದ (Belagavi) ತಮ್ಮ ಮತಬೇಟೆ ಶುರು ಮಾಡಿದ್ದಾರೆ. ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮೋದಿ ಅವರಿಗೆ ಅವರ ತಾಯಿಯ ಫೋಟೋ ಇರುವ ಫ್ರೇಮ್​ವೊಂದನ್ನು ಗಿಫ್ಟ್​ ಆಗಿ ನೀಡಲಾಯ್ತು. ಈ ವೇಳೆ ಮೋದಿ ತಾಯಿ ಫೋಟೋ ನೋಡುತ್ತಿದ್ದಂತೆಯೇ ಕೊಂಚ ಭಾವುಕರಾದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More