ದೆಹಲಿ ತಲುಪುತ್ತಿದ್ದಂತೆಯೇ ಉಡುಪಿ ಭೇಟಿಯ ಸಂತಸ ಹಂಚಿಕೊಂಡ ಮೋದಿ

Updated on: Nov 28, 2025 | 6:23 PM

ಪ್ರಧಾನಿ ನರೇಂದ್ರ ಮೋದಿ ಅವರು 17 ವರ್ಷಗಳ ಬಳಿಕ ಇಂದು (ನವೆಂಬರ್ 28) ಕೃಷ್ಣನಗರಿ ಉಡುಪಿಗೆ ಭೇಟಿ ನೀಡಿದ್ದು, ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿದ್ದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ರೋಡ್ ಶೋ ಮೂಲಕ ಕೃಷ್ಣ ಮಠಕ್ಕೆ ಆಗಮಿಸಿದ ಮೋದಿಗೆ ರಸ್ತೆಯುದ್ಧಕ್ಕೂ ಹೂಮಳೆಯ ಸ್ವಾಗತ ಕೋರಲಾಯ್ತು. ಇದಕ್ಕೆ ಮೋದಿ ಫಿದಾ ಆಗಿದ್ದಾರೆ.

ಬೆಂಗಳೂರು, (ನವೆಂಬರ್ 28): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 17 ವರ್ಷಗಳ ಬಳಿಕ ಇಂದು (ನವೆಂಬರ್ 28) ಕೃಷ್ಣನಗರಿ ಉಡುಪಿಗೆ (Udupi) ಭೇಟಿ ನೀಡಿದ್ದು, ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿದ್ದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ವ ಸಂಪ್ರದಾಯದಂತೆ ಹಣೆಗೆ ತಿಲಕ, ಕೊರಳಲ್ಲಿ ತುಳಸಿ ಮಣಿ ಮಾಲೆ, ನವಿಲು ಗರಿಯ ಪೇಟ ಧರಿಸಿದ್ದ ನರೇಂದ್ರ ಮೋದಿ, ಭಗವದ್ಗೀತೆಯ 15ನೇ ಅಧ್ಯಾಯದಲ್ಲಿರುವ ಪುರುಷೋತ್ತಮ ಯೋಗವನ್ನ ಪಠಿಸಿದ್ರು. ಇದಕ್ಕೂ ಮುನ್ನ ಉಡುಪಿಗೆ ಎಂಟ್ರಿ ಕೊಡ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ತು.

ರೋಡ್ ಶೋ ಮೂಲಕ ಕೃಷ್ಣ ಮಠಕ್ಕೆ ಆಗಮಿಸಿದ ಮೋದಿಗೆ ರಸ್ತೆಯುದ್ಧಕ್ಕೂ ಹೂಮಳೆಯ ಸ್ವಾಗತ ಕೋರಲಾಯ್ತು. ಹುಲಿವೇಷ ಕುಣಿತ, ವಿವಿಧ ಕಲಾ ತಂಡಗಳು ಮೋದಿಗೆ ಸ್ವಾಗತ ಕೋರಿವೆ. ಈ ಅದ್ಧೂರಿ ಸ್ವಾಗತಕ್ಕೆ ಮೋದಿ ಫಿದಾ ಆಗಿದ್ದಾರೆ. ಹೌದು..ದೆಹಲಿ ತಲುಪುತ್ತಿದ್ದಂತೆಯೇ ನರೇಂದ್ರ ಮೋದಿ, ಉಡುಪಿಯಲ್ಲಿ ಸಿಕ್ಕ ಅದ್ಧೂರಿ ಸ್ವಾಗತ, ಪ್ರೀತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಉಡುಪಿ ಪ್ರವಾಸದ ವಿಡಿಯೋ ತುಣುಕ ಹಂಚಿಕೊಂಡಿರುವ ಮೋದಿ, ಭಕ್ತಿ, ಕಲಿಕೆ ಮತ್ತು ಸಂಪ್ರದಾಯಕ್ಕೆ ಹೆಸರಾದ ಸ್ಥಳ ಉಡುಪಿಗೆ ಭೇಟಿ ನೀಡಿದ್ದು ಸಂತೋಷವಾಯಿತು. ಉಡುಪಿಯಲ್ಲಿ ನನಗೆ ದೊರೆತ ಸ್ವಾಗತ ಸದಾ ನೆನಪಿನಲ್ಲಿ ಉಳಿಯುತ್ತದೆ. ಜನತೆಗೆ ನನ್ನ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.