ನಮ್ಮ ಕುಟುಂಬದ ಬಗ್ಗೆ ಪ್ರಧಾನಿ ಮೋದಿಯವರು ಈಗಲೂ ಮೊದಲಿನ ಗೌರವ, ಪ್ರೀತಿ ಇಟ್ಟುಕೊಂಡಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

|

Updated on: Dec 21, 2023 | 2:35 PM

ತಾನು ಮುಖ್ಯಮಂತ್ರಿಯಾಗಿದ್ದಾಗ ಉತ್ತಮವಾಗಿ ಆಡಳಿತ ನಡೆಸಿದರೂ ಅದಕ್ಕೆ ಗೌರವ ಸಿಗಲಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರೆಂದು ಕುಮಾರಸ್ವಾಮಿ ಹೇಳಿದರು. ಸುದ್ದಿಗೋಷ್ಟಿ ಅರಂಭಿಸಿದ ಬಳಿಕ ಕುಮಾರಸ್ವಾಮಿಯವರು ತಮ್ಮ ಕುಟುಂಬದ ಬಗ್ಗೆಯೇ ಹೆಚ್ಚು ಮಾತಾಡಿದ್ದನ್ನು ಇಲ್ಲಿ ಗಮನಿಸಬಹುದು. ದೇವೇಗೌಡರ ಕುಟುಂಬ ರಾಜ್ಯ ರಾಜಕಾರಣಕ್ಕೆ ಅನಿವಾರ್ಯ ಎನ್ನುವ ಧಾಟಿಯಲ್ಲಿ ಅವರು ಮಾತಾಡಿದರು.

ದೆಹಲಿ: ದೇಶದ ರಾಜಧಾನಿಯಲ್ಲಿಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಭೇಟಿ ಮಾಡಿದ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೊದಲಿನಿಂದಲೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ (HD Devegowda) ಮತ್ತು ಅವರ ಕುಟುಂಬದ ಬಗ್ಗೆ ಬಹಳ ಗೌರವ ಇಟ್ಟುಕೊಂಡಿದ್ದಾರೆ, ಈಗಲೂ ಅದೇ ಪ್ರೀತಿ-ವಿಶ್ವಾಸಗಳೊಂದಿಗೆ ಮಾತಾಡಿದರು ಎಂದು ಹೇಳಿದರು. ದೇವೇಗೌಡರು, ಪ್ರಥಮವಾಗಿ, ಅತ್ಯಂತ ಹಿಂದುಳಿದ ಕಾಡುಗೊಲ್ಲ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ಮಾತಾಡಿದರು. ನಂತರ ಮಾಜಿ ಪ್ರಧಾನ ಮಂತ್ರಿಯವರು, ರಾಜ್ಯದ ನೀರಾವರಿ ಯೋಜನೆಗಳ ಕಡೆ ಪ್ರಧಾನಿ ಮೋದಿಯವರ ಗಮನ ಸೆಳೆದು. ತಮ್ಮ ಕಾಲದಲ್ಲಿ ನೀರಾವರಿ ಸ್ಥಿತಿ ಹೇಗಿತ್ತು ಮತ್ತು ಈಗ ಹೇಗಿದೆ ಅನ್ನೋದನ್ನು ವಿವರಿಸಿ, ಈಗಿನ ಪರಿಸ್ಥಿತಿ ಸುಧಾರಣೆಗೆ ನೆರವು ಕೋರಿದರು ಎಂದು ಕುಮಾರಸ್ವಾಮಿ ಹೇಳಿದರು. ತಾವು ತೆಂಗು ಬೆಳೆಗಾರರ ಸಮಸ್ಯೆಯ ಬಗ್ಗೆ ಪ್ರಧಾನಿಯವರೊಂದಿಗೆ ಚರ್ಚಿಸಿದ್ದು, ಕೊಬ್ಬರಿಗೆ ಪ್ರತಿ ಕ್ವಿಂಟಲ್ ರೂ. 15,000 ಬೆಂಬಲ ಬೆಲೆ ನಿಗದಿ ಪಡಿಸಲು ಮನವಿ ಮಾಡಿರುವುದಾಗಿ ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ