PM Narendra Modi: ಕೇರಳದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ಗೆ ಪ್ರಧಾನಿ ಮೋದಿ ಚಾಲನೆ

|

Updated on: Apr 25, 2023 | 7:11 PM

ಕೇರಳದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ರೈಲು ಪ್ರಮುಖವಾಗಿ 11 ಜಿಲ್ಲೆಗಳಿಗೆ ಸಂಚರಿಸಲಿದೆ. ರೈಲು ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಳಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ವಿವಿಧ ನಗರಗಳನ್ನು ಸಂಪರ್ಕಿಸಲಿದೆ.

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ವಂದೇ ಭಾರತ್ ರೈಲು ಈಗ ದಕ್ಷಿಣ ಭಾರತದಲ್ಲೂ ಹೆಚ್ಚು ಜನಪ್ರಿಯವಾಗುತ್ತಿದೆ. ಕೇರಳದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ರೈಲು ಪ್ರಮುಖವಾಗಿ 11 ಜಿಲ್ಲೆಗಳಿಗೆ ಸಂಚರಿಸಲಿದೆ. ರೈಲು ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಳಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ವಿವಿಧ ನಗರಗಳನ್ನು ಸಂಪರ್ಕಿಸಲಿದೆ. ಮೊದಲ ಹಂತದ ಅಡಿಯಲ್ಲಿ ಕಾಸರಗೋಡಿನಿಂದ ತಿರುವನಂತಪುರದವರೆಗಿನ ಸಂಪೂರ್ಣ ಹಳಿಯನ್ನು ಗಂಟೆಗೆ 110 ಕಿ.ಮೀ ವೇಗಕ್ಕೆ ಪರಿವರ್ತಿಸಲು 381 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ತಿರುವುಗಳನ್ನು ನೇರಗೊಳಿಸುವುದು ಮತ್ತು ಇತರ ಅಗತ್ಯ ಹೊಂದಾಣಿಕೆಗಳನ್ನು ಒಳಗೊಂಡಿರುವ ಎರಡನೇ ಹಂತವು ಪೂರ್ಣಗೊಳ್ಳಲು ಎರಡರಿಂದ ಮೂರೂವರೆ ವರ್ಷ ಬೇಕಾಗುತ್ತದೆ. ಬಳಿಕ ಈ ಟ್ರ್ಯಾಕ್‌ನ ವೇಗವನ್ನು ಗಂಟೆಗೆ 130 ಕಿಮೀಗೆ ಹೆಚ್ಚಿಸಲಾಗುತ್ತದೆ.

Published on: Apr 25, 2023 07:11 PM