Karnataka Assembly Polls: ಮಂಡ್ಯದ ನಾಯಿಯೊಂದರ ಪ್ರಕಾರ ರಾಜ್ಯದ ಮುಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

Karnataka Assembly Polls: ಮಂಡ್ಯದ ನಾಯಿಯೊಂದರ ಪ್ರಕಾರ ರಾಜ್ಯದ ಮುಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 25, 2023 | 6:00 PM

ಪೋಟೋ ಎತ್ಕೊಂಡು ಬಾ ಅಂದ ಕೂಡಲೇ ನಾಯಿ ದೇವರ ಕೋಣೆಗೆ ನುಗ್ಗಿ ಅಲ್ಲಿ ಥರ್ಮೋಕೋಲ್ ಗೆ ಅಂಟಿಸಿದ ಮೂರು ಫೋಟೋಗಳ ಪೈಕಿ ಕುಮಾರಸ್ವಾಮಿಯವರ ಫೋಟೋ ಬಾಯಲ್ಲಿ ಹಿಡಿದುಕೊಂಡು ಬರುತ್ತದೆ

ಮಂಡ್ಯ:  ಮುಂದಿನ ಮುಖ್ಯಮಂತ್ರಿ ಯಾರು ಅಂತ ನಿರ್ಧರಿತವಾಗಿದೆ ಮಾರಾಯ್ರೇ. ಮಂಡ್ಯದ ಈ ನಾಯಿಯ (dog) ಪ್ರಕಾರ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ನಾಯಿಯನ್ನು ಸಾಕಿದವರು ಕುಮಾರಸ್ವಾಮಿಯವರ ಬೆಂಬಲಿಗರಿರಬೇಕು. ಯಾಕೆಂದರೆ ಇದಕ್ಕೂ ಮೊದಲು ಯಾವತ್ತಾದರೂ ನಾಯಿ ಭವಿಷ್ಯ ನುಡಿದಿದ್ದನ್ನು ಕೇಳಿದ್ದೀರಾ? ಮನೆಯ ಮಾಲೀಕರು ಯಾವುದಾದರೂ ಒಂದು ಪೋಟೋ (photo) ಎತ್ಕೊಂಡು ಬಾ ಅಂದ ಕೂಡಲೇ ನಾಯಿ ದೇವರ ಕೋಣೆಗೆ ನುಗ್ಗಿ ಅಲ್ಲಿ ಥರ್ಮೋಕೋಲ್ ಗೆ ಅಂಟಿಸಿದ ಮೂರು ಫೋಟೋಗಳ ಪೈಕಿ ಕುಮಾರಸ್ವಾಮಿಯವರ ಫೋಟೋ ಬಾಯಲ್ಲಿ ಹಿಡಿದುಕೊಂಡು ಬರುತ್ತದೆ. ಉಳಿದ ಎರಡು ಫೋಟೋಗಳಲ್ಲಿ ಯಾರಿದ್ದರು ಅಂತ ಗೊತ್ತಿಲ್ಲ. ಮನೆಯ ಮಾಲೀಕರು ಮುಖ್ಯಮಂತ್ರಿ ಯಾರು ಅಂತ ನಾಯಿಗೆ ಕೇಳೋದಿಲ್ಲ, ಒಂದು ಪೋಟೋ ಎತ್ಕೊಂಡು ಬಾ ಅಂದಾಕ್ಷಣ ಅದು ಬಲಭಾಗದ ಕೊನೆಯಲ್ಲಿದ್ದ ಪೋಟೋ ಎತ್ತಿಕೊಂಡು ಬರುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ