ಕೋಲಾರದಲ್ಲಿ ಮುಳಬಾಗಿಲು ದೋಸೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ

Updated on: Apr 30, 2023 | 1:34 PM

ಪ್ರಧಾನಿ ನರೇಂದ್ರ ಮೋದಿಯವರು ಇಂದು (ಏ.30) ಕೋಲಾರಕ್ಕೆ ಭೇಟಿ ನೀಡಿ ಮತಯಾಚಿಸಿದರು. ಈ ವೇಳೆ ಕಾಂಗ್ರೆಸ್​ ವಿರುದ್ಧ ವಾಕ್ಪ್ರಹಾರ ಮಾಡಿದ್ದು, ಭ್ರಷ್ಟಾಚಾರದಲ್ಲಿ ಮುಳಗಿತ್ತು ಎಂದು ಆರೋಪ ಮಾಡಿದರು.

ಕೋಲಾರ: ಪ್ರಧಾನಿ ನರೇಂದ್ರ ಮೋದಿಯವರು ಇಂದು (ಏ.30) ಕೋಲಾರಕ್ಕೆ ಭೇಟಿ ನೀಡಿ ಮತಯಾಚಿಸಿದರು. ಈ ವೇಳೆ ಕಾಂಗ್ರೆಸ್​ ವಿರುದ್ಧ ವಾಕ್ಪ್ರಹಾರ ಮಾಡಿದ್ದು, ಭ್ರಷ್ಟಾಚಾರದಲ್ಲಿ ಮುಳಗಿತ್ತು ಎಂದು ಆರೋಪ ಮಾಡಿದರು. ಇದರ ಜೊತೆ ಕೇಂದ್ರ ಬಿಜೆಪಿ ಸರ್ಕಾರದ ಬಗ್ಗೆ ಹೇಳುತ್ತಾ ಕೋಲಾರದಲ್ಲಿ ಅಭಿವೃದ್ಧಿಗೆ ಸಂಪರ್ಕ‌‌ ಮುಖ್ಯ, ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣವಾಗುತ್ತಿದ್ದ ಹಲವು ಕೈಗಾರಿಕೆಗಳು ಕೋಲಾರದತ್ತ ಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಲಾಭವಾಗುತ್ತದೆ ಅಂದರೆ ಮುಳಬಾಗಿಲು ದೋಸೆ ದೇಶದ ಎಲ್ಲೆಡೆ ಸಿಗುವಂತಾಗಿದೆ ಎಂದು ಹೇಳಿದರು. ಈ ಮೂಲಕ ತಮ್ಮ ಸ್ಥಳೀಯ ವಿಚಾರಗಳ ಬಗ್ಗೆ ಪ್ರಧಾನಿ ಮೋದಿಯವರ ಅರಿವು ಗಮನಾರ್ಹ.