ಹಸ್ತಪ್ರತಿ ಡಿಜಿಟಲೀಕರಣವನ್ನು ಹೆಚ್ಚಿಸಲು ಪ್ರಧಾನಿ ಮೋದಿಯಿಂದ ಜ್ಞಾನ ಭಾರತಂ ಪೋರ್ಟಲ್ ಉದ್ಘಾಟನೆ

Updated on: Sep 12, 2025 | 9:42 PM

ಕೇಂದ್ರ ಸಂಸ್ಕೃತಿ ಸಚಿವಾಲಯವು ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಜ್ಞಾನ ಭಾರತಂ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಈ ವೇಳೆ ಜೊತೆಗಿದ್ದರು. ಗುರುವಾರ ಪ್ರಾರಂಭವಾದ ಮೂರು ದಿನಗಳ ಸಮ್ಮೇಳನವು 'ಹಸ್ತಪ್ರತಿ ಪರಂಪರೆಯ ಮೂಲಕ ಭಾರತದ ಜ್ಞಾನ ಪರಂಪರೆಯನ್ನು ಮರಳಿ ಪಡೆಯುವುದು' ಎಂಬ ವಿಷಯದೊಂದಿಗೆ, ಪ್ರಮುಖ ವಿದ್ವಾಂಸರು, ಸಂರಕ್ಷಣಾವಾದಿಗಳು, ತಂತ್ರಜ್ಞರು ಮತ್ತು ನೀತಿ ನಿರೂಪಕರನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ.

ನವದೆಹಲಿ, ಸೆಪ್ಟೆಂಬರ್ 12: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಹಸ್ತಪ್ರತಿಗಳ ಡಿಜಿಟಲೀಕರಣ, ಸಂರಕ್ಷಣೆ ಮತ್ತು ಸಾರ್ವಜನಿಕ ಪ್ರವೇಶವನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ನಿಟ್ಟಿನಲ್ಲಿ ಆರಂಭಿಸಲಾದ ಡಿಜಿಟಲ್ ವೇದಿಕೆಯಾದ ಜ್ಞಾನ ಭಾರತಂ ಪೋರ್ಟಲ್ ಅನ್ನು ಉದ್ಘಾಟಿಸಿದರು. ಇದಕ್ಕೂ ಮುನ್ನ ಕೇಂದ್ರ ಸಂಸ್ಕೃತಿ ಸಚಿವಾಲಯವು ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಜ್ಞಾನ ಭಾರತಂ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಜೊತೆಗಿದ್ದರು. ಗುರುವಾರ ಪ್ರಾರಂಭವಾದ ಮೂರು ದಿನಗಳ ಈ ಸಮ್ಮೇಳನವು ‘ಹಸ್ತಪ್ರತಿ ಪರಂಪರೆಯ ಮೂಲಕ ಭಾರತದ ಜ್ಞಾನ ಪರಂಪರೆಯನ್ನು ಮರಳಿ ಪಡೆಯುವುದು’ ಎಂಬ ವಿಷಯದೊಂದಿಗೆ ಪ್ರಮುಖ ವಿದ್ವಾಂಸರು, ಸಂರಕ್ಷಣಾವಾದಿಗಳು, ತಂತ್ರಜ್ಞರು ಮತ್ತು ನೀತಿ ನಿರೂಪಕರನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 12, 2025 09:42 PM