ಮೈಸೂರಲ್ಲಿ ಶಾಸಕ ರಾಮದಾಸ್​ ಬೆನ್ನುತ್ತಟ್ಟಿ ಶುಭಹಾರೈಸಿದ ಪ್ರಧಾನಿ ಮೋದಿ

|

Updated on: Mar 12, 2023 | 1:17 PM

ಬೆಂಗಳೂರು-ಮೈಸೂರು ಎಕ್ಸಪ್ರೆಸ್​​ವೇ ಉದ್ಘಾಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಿಳಿದ ವೇಳೆ ಶಾಸಕ ಎಸ್ ಎ ರಾಮದಾಸ್ ಸ್ವಾಗತಿಸಿದರು.

ಬೆಂಗಳೂರು-ಮೈಸೂರು ಎಕ್ಸಪ್ರೆಸ್​​ವೇಯನ್ನು ಪ್ರಧಾನಿ ನರೇಂದ್ರ ಮೋದಿ ಮಂಡ್ಯದ ಮದ್ದೂರಿನ ಗೆಜ್ಜಲಗೆರೆಯಲ್ಲಿ ಲೋಕಾರ್ಪಣೆಗೊಳಿಸಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಮೈಸೂರು ವಿಮಾನ ನಿಲ್ದಾಣದಲ್ಲಿ ಇಳಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಶಾಸಕ ಎಸ್ ಎ ರಾಮದಾಸ್ ನಾಗೇಂದ್ರ ಮೇಯರ್ ಶಿವಕುಮಾರ್ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಸ್ವಾಗತಿಸಿದರು. ಈ ವೇಳೆ ಪ್ರಧಾನಿ ಮೋದಿ ಶಾಸಕ ರಾಮದಾಸ್​ಗೆ ಬೆನ್ನುತಟ್ಟಿ ಶುಭ ಹಾರೈಸಿದ್ದು, ವಿಶೇಷವಾಗಿತ್ತು.