ಪ್ರಧಾನಿ ಮೋದಿ ಕಚೇರಿಯಿಂದ ಬಂದ ಪತ್ರ ಕಂಡು ಭಾವುಕರಾದ ದಿಯಾ ಗೋಸಾಯ್
ಪ್ರಧಾನಿ ಮೋದಿ ಕಚೇರಿಯಿಂದ ಬಂದಿದ್ದ ಪತ್ರ ಕಂಡು ಮನತುಂಬಿ ಬಂದಿತ್ತು ಎಂದು ಕಲಾವಿದೆ ದಿಯಾ ಗೋಸಾಯ್ ಹೇಳಿದ್ದಾರೆ. ಮೋದಿ ಆರ್ಕೈವ್ಸ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ದಿಯಾ ಮಾತನಾಡಿದ್ದಾರೆ. ಅಂದು ಪತ್ರವೊಂದು ಬಂದಿತ್ತು ಅದರ ಮೇಲಿದ್ದ ಲಾಂಛನ ನೋಡಿ ನನ್ನ ಕಣ್ಣುಗಳು ಅರಳಿದ್ದವು, ಅದು ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯಿಂದ ಬಂದ ಪತ್ರವಾಗಿತ್ತು.
ಪ್ರಧಾನಿ ಮೋದಿ ಕಚೇರಿಯಿಂದ ಬಂದಿದ್ದ ಪತ್ರ ಕಂಡು ಮನತುಂಬಿ ಬಂದಿತ್ತು ಎಂದು ಕಲಾವಿದೆ ದಿಯಾ ಗೋಸಾಯ್ ಹೇಳಿದ್ದಾರೆ. ಮೋದಿ ಆರ್ಕೈವ್ಸ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ದಿಯಾ ಮಾತನಾಡಿದ್ದಾರೆ.
ಅಂದು ಪತ್ರವೊಂದು ಬಂದಿತ್ತು ಅದರ ಮೇಲಿದ್ದ ಲಾಂಛನ ನೋಡಿ ನನ್ನ ಕಣ್ಣುಗಳು ಅರಳಿದ್ದವು, ಅದು ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯಿಂದ ಬಂದ ಪತ್ರವಾಗಿತ್ತು.
ಪತ್ರವನ್ನು ಓದುತ್ತಿದ್ದಂತೆ ವಡೋದರಾ ರೋಡ್ ಶೋ ಸಮಯದಲ್ಲಿ ನಡೆದ ಘಟನೆ ನೆನಪಿಗೆ ಬಂದಿತ್ತು.
ಆ ಪತ್ರದಲ್ಲಿ ವಡೋದರಾ ರೋಡ್‌ಶೋ ಸಮಯದಲ್ಲಿ ನಿಮ್ಮಿಂದ ಸುಂದರವಾದ ಚಿತ್ರವನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಪ್ರಧಾನಿ ಪತ್ರದಲ್ಲಿ ಬರೆದಿದ್ದರು.
ದಿಯಾಳ ಮನಸ್ಸು ಬರೋಡದ ಆ ಅವಿಸ್ಮರಣೀಯ ದಿನವಾದ ಅಕ್ಟೋಬರ್ 28ಕ್ಕೆ ಹಿಂತಿರುಗಿತು. ಜನಸಮೂಹದ ನಡುವೆ, ಅವರು ದಿವ್ಯಾಂಗರಾದರೂ ಕೂಡ ಅತ್ಯುತದಾಹದಿಂದ ಬಂದಿದ್ದರು, ಚಿತ್ರವನ್ನು ಹಿಡಿದು ಕುಳಿತಿದ್ದರು. ಅಂದು ಪ್ರಧಾನಿ ಮೋದಿ ಹಾಗೂ ಸ್ಪಾನಿಷ್ ಅಧ್ಯಕ್ಷ ಸ್ಯಾಂಚೆಸ್ ಅಲ್ಲಿಗೆ ಬಂದು ಅವರಿಂದ ಚಿತ್ರಗಳನ್ನು ಸ್ವೀಕರಿಸಿದ್ದನ್ನು ಎಂದೂ ಮರೆಯಲಾಗದು ಎಂದಿದ್ದಾರೆ.
ಅದೇ ಸಮರ್ಪಣೆ ಮತ್ತು ಶ್ರದ್ಧೆಯಿಂದ ಕಲೆಯನ್ನು ಮುಂದುವರೆಸುವಂತೆ ಪ್ರಧಾನಿ ಮೋದಿ ದಿಯಾಗೆ ಹೇಳಿದ್ದಾರೆ.
ನಮ್ಮ ಯುವಕರು ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.
ದಿಯಾ ಗೋಸಾಯ್ ಯಾರು?
ಪ್ರಧಾನಿ ನರೇಂದ್ರ ಮೋದಿ ಸ್ಪ್ಯಾನಿಸ್ ಅಧ್ಯಕ್ಷರ ಜತೆ ವಡೋದರಲ್ಲಿ ರೋಡ್‌ಶೋ ನಡೆಸುತ್ತಿದ್ದಾಗ ಈ ಕಲಾವಿದೆ ದಿಯಾರನ್ನು ಭೇಟಿಯಾಗಿದ್ದರು.ಟೋಕಾಲ್ ಅನ್ನು ಲೆಕ್ಕಿಸದೆ, ಪ್ರಧಾನಿ ಮೋದಿ ಮತ್ತು ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ವಿದ್ಯಾರ್ಥಿಯನ್ನು ಭೇಟಿಯಾಗಿದ್ದರು. ಎಂಎಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ, ಪ್ರತಿಭಾನ್ವಿತ ಚಿತ್ರಗಾರ್ತಿಯೂ ಹೌದು.ಪೇಂಟಿಂಗ್ ನೋಡಿದ ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಝ್ ತುಂಬಾ ಖುಷಿ ಪಟ್ಟಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ