ದೆಹಲಿಯಲ್ಲಿ ಬಸನಗೌಡ ಯತ್ನಾಳ್​ರನ್ನು ಜೊತೆಗೂಡಿದ ರೆಬೆಲ್ ಬಿಜೆಪಿ ನಾಯಕರು, ಇಂದು ವರದಿ ಸಲ್ಲಿಕೆ

ದೆಹಲಿಯಲ್ಲಿ ಬಸನಗೌಡ ಯತ್ನಾಳ್​ರನ್ನು ಜೊತೆಗೂಡಿದ ರೆಬೆಲ್ ಬಿಜೆಪಿ ನಾಯಕರು, ಇಂದು ವರದಿ ಸಲ್ಲಿಕೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 03, 2024 | 12:44 PM

ಶೋಕಾಸ್ ನೋಟೀಸ್ ನ ಅಧಿಕೃತ ಪ್ರತಿ ತನಗಿನ್ನೂ ಸಿಕ್ಕಿಲ್ಲ ಎಂದು ನಿನ್ನೆ ಬಸನಗೌಡ ಯತ್ನಾಳ್ ಹೇಳಿದ್ದರು. ಮಧ್ಯಂತರ ವರದಿಯನ್ನು ಸಲ್ಲಿಸಲು ಇವತ್ತು ಅವರು ಕೇಂದ್ರದ ನಾಯಕರನ್ನು ಭೇಟಿಯಾಗಲಿದ್ದಾರೆ. ಅದೇ ಸಮಯಕ್ಕೆ ಅವರು ವರಿಷ್ಠರೊಂದಿಗೆ ನೋಟೀಸ್ ವಿಷಯದಲ್ಲಿ ಮಾತಾಡುವ ನಿರೀಕ್ಷೆ ಇದೆ.

ದೆಹಲಿ: ನಿನ್ನೆ ರೆಬೆಲ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ದೆಹಲಿಯಲ್ಲಿ ಕಾಣಿಸಿದರು. ಇವತ್ತು ಅವರೊಂದಿಗೆ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ವಕ್ಫ್ ವಿರುದ್ಧ ಹೋರಾಟ ನಡೆಸಿದ ಅವರ ಸಂಗಡಿಗ ಬಿಜೆಪಿ ಮುಖಂಡರು ಜೊತೆಗೂಡಿದರು. ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಮತ್ತು ಬೇರೆ ಕೆಲ ಮುಖಂಡರು ಇವತ್ತು ತಮ್ಮ ಹೋರಾಟದ ಮಧ್ಯಂತರ ವರದಿಯನ್ನು ಕೇಂದ್ರದ ನಾಯಕರಿಗೆ ಸಲ್ಲಿಸಲಿದ್ದಾರೆ. ಏತನ್ಮಧ್ಯೆ, ಹೈಕಮಾಂಡ್ ಜಾರಿಮಾಡಿರುವ ಶೋಕಾಸ್ ನೋಟೀಸ್ ಗೆ ಯತ್ನಾಳ್ ಉತ್ತರ ನೀಡುವ ನಿರೀಕ್ಷೆಯೂ ಇದ್ದು ಅದೇ ಕಾರಣಕ್ಕೆ ಬಿಜೆಪಿ ಮುಖಂಡರು ಸಭೆ ಸೇರಿರುವ ಸಾಧ್ಯತೆ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹೈಕಮಾಂಡ್ ವಿಜಯೇಂದ್ರ ಪರವೂ ಇಲ್ಲ..ಯತ್ನಾಳ್‌ ವಿರುದ್ಧವೂ ಇಲ್ಲ: ನೊಟೀಸ್​ಗೆ ಸೀಮಿತವಾಗುತ್ತಾ ಕ್ರಮ?