ಹಿರಿಯ ಮುತ್ಸದಿ ಎಲ್ ಕೆ ಅಡ್ವಾಣಿಯವರಿಗೆ ಭಾರತ ರತ್ನ ಸನ್ಮಾನ ಘೋಷಿಸಿ ಸಂತಸ ಹಂಚಿಕೊಂಡ ಪ್ರಧಾನಿ ಮೋದಿ

|

Updated on: Feb 03, 2024 | 2:32 PM

ಮಾಜಿ ಕೇಂದ್ರ ಸಚಿವರೂ ಅಗಿರುವ ಅಡ್ವಾಣಿಯವರು ಬಿಜೆಪಿಯ ಪ್ರತಿಷ್ಠಾಪನಾ ಸದಸ್ಯ ಮತ್ತು ರಾಮಜನ್ಮಭೂಮಿ ಆಂದೋಳನದ ರೂವಾರಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಬದುಕು ಆರಂಭಿಸಿದ ಅಡ್ವಾಣಿ ಅವರು, ಭಾರತದ ಉಪ ಪ್ರಧಾನ ಮಂತ್ರಿಯಾಗುವ ಮಟ್ಟಕ್ಕೆ ಬೆಳೆದರು ಎಂದು ಮೋದಿ ಹೇಳಿದ್ದಾರೆ.

ದೆಹಲಿ: ಹಿರಿಯ ಮುತ್ಸದ್ದಿ, ಬಿಜೆಪಿಯ ಧೀಮಂತ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರನ್ನು (Lal Krishna Advani) ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ (Bharat Ratna) ಸನ್ಮಾನಿಸಲಾಗುವುದೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಶನಿವಾರ ಘೋಷಣೆ ಮಾಡಿದ್ದಾರೆ. ತಮ್ಮ X ಹ್ಯಾಂಡಲ್ ನಲ್ಲಿ ವಿಷಯವನ್ನು ಹೇಳಿಕೊಂಡಿರುವ ಪ್ರಧಾನಿ ಮೋದಿ, ‘ಶ್ರೀ ಎಲ್ ಕೆ ಅಡ್ವಾಣೀ ಜೀ ಅವರನ್ನು ಭಾರತ ರತ್ನ ಗೌರವದಿಂದ ಸನ್ಮಾನಿಸಲಾಗುವುದೆಂದು ಅತೀವ ಸಂತೋಷದಿಂದ ಹೇಳುತ್ತಿದ್ದೇನೆ. ನಾನು ಈಗಾಗಲೇ ಅವರೊಂದಿಗೆ ಮಾತಾಡಿ ಅಭಿನಂದಿಸಿದ್ದೇನೆ. ನಮ್ಮ ಸಮಯದ ಅತ್ಯಂತ ಗೌರವಾನ್ವಿತ ಮುತ್ಸದಿಯಾಗಿರುವ ಅವರು ಭಾರತದ ಪ್ರಗತಿಗೆ ಅಪಾರ ಕಾಣಿಕೆ ನೀಡಿದ್ದಾರೆ,’ ಎಂದು ಬರೆದಿದ್ದಾರೆ.

ಮಾಜಿ ಕೇಂದ್ರ ಸಚಿವರೂ ಅಗಿರುವ ಅಡ್ವಾಣಿಯವರು ಬಿಜೆಪಿಯ ಪ್ರತಿಷ್ಠಾಪನಾ ಸದಸ್ಯ ಮತ್ತು ರಾಮಜನ್ಮಭೂಮಿ ಆಂದೋಳನದ ರೂವಾರಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಬದುಕು ಆರಂಭಿಸಿದ ಅಡ್ವಾಣಿ ಅವರು, ಭಾರತದ ಉಪ ಪ್ರಧಾನ ಮಂತ್ರಿಯಾಗುವ ಮಟ್ಟಕ್ಕೆ ಬೆಳೆದರು ಎಂದು ಮೋದಿ ಹೇಳಿದ್ದಾರೆ.

‘ಗೃಹ ಹಾಗೂ ವಾರ್ತಾ ಮತ್ತುಪ್ರಚಾರ ಇಲಾಖೆ ಸಚಿವರಾಗಿಯೂ ಅವರು ವಿಶಿಷ್ಟ ಛಾಪು ಮೂಡಿಸಿದ್ದರು, ಸಂಸದೀಯ ವ್ಯವಹಾರಗಳಲ್ಲಿ ಅವರು ನೀಡುತ್ತಿದ್ದ ಸಲಹೆ ಸೂಚನೆಗಳು ಬಹಳ ಮಹತ್ವದ ಪಾತ್ರ ನಿರ್ವಹಿಸಿವೆ’, ಎಂದು ಪ್ರಧಾನಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ