PM Modi on GST: ನವರಾತ್ರಿ ಮೊದಲ ದಿನದಿಂದ ಜಿಎಸ್‌ಟಿ ಉತ್ಸವ ಆರಂಭ ಎಂದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 21) ದೇಶವನ್ನುದ್ದೇಶಿಸಿ ಮಾತನಾಡಿದ್ದು, ಭಾಷಣದಲ್ಲಿ ಪ್ರಮುಖವಾಗಿ ನಾಳೆಯಿಂದ ಜಾರಿಯಾಗುವ ಜಿಎಸ್‌ಟಿ ಕುರಿತು ಮಾತನಾಡಿದ್ದಾರೆ. ನವರಾತ್ರಿ ಹಬ್ಬಕ್ಕೆ ದೇಶದ ಪ್ರತಿಯೊಬ್ಬರಿಗೆ ಸಿಹಿ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಪ್ರಮುಖವಾಗಿ ನಾಳೆಯಿಂದ ಜಾರಿಯಾಗುವ ಜಿಎಸ್‌ಟಿ ಕುರಿತು ಮಾತನಾಡಿದ್ದಾರೆ.
ನವದೆಹಲಿ, (ಸೆಪ್ಟೆಂಬರ್ 21): ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 21) ದೇಶವನ್ನುದ್ದೇಶಿಸಿ ಮಾತನಾಡಿದ್ದು, ಭಾಷಣದಲ್ಲಿ ಪ್ರಮುಖವಾಗಿ ನಾಳೆಯಿಂದ ಜಾರಿಯಾಗುವ ಜಿಎಸ್‌ಟಿ ಕುರಿತು ಮಾತನಾಡಿದ್ದಾರೆ. ನವರಾತ್ರಿ ಹಬ್ಬಕ್ಕೆ ದೇಶದ ಪ್ರತಿಯೊಬ್ಬರಿಗೆ ಸಿಹಿ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಪ್ರಮುಖವಾಗಿ ನಾಳೆಯಿಂದ ಜಾರಿಯಾಗುವ ಜಿಎಸ್‌ಟಿ ಕುರಿತು ಮಾತನಾಡಿದ್ದಾರೆ. ದೇಶದ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ ಹೇಳುವ ಮೂಲಕ ಭಾಷಣ ಆರಂಭಿಸಿದ ಮೋದಿ, ನಾಳೆ ನವರಾತ್ರಿ ಹಬ್ಬದ ಮೊದಲ ದಿನ ಆರಂಭವಾಗಲಿದ್ದು, ನವರಾತ್ರಿ ಮೊದಲ ದಿನದಿಂದ ಜಿಎಸ್‌ಟಿ ಉತ್ಸವ ಆರಂಭವಾಗಲಿದೆ. ಜಿಎಸ್ಟಿಯಿಂದ ನಿಮ್ಮೆಲ್ಲರ ಉಳಿತಾಯ ಶುರುವಾಗಲಿದೆ. ಎಲ್ಲ ವರ್ಗದ ಜನರಿಗೂ ಉಳಿತಾಯದ ಉತ್ಸವ ಪ್ರಾರಂಭವಾಗಲಿದೆ ಎಂದರು.
