PM Narendra Modi: ಎಲ್ಲ ಸಮುದಾಯ ಗೌರವಿಸುವ ಗುಣಕ್ಕೆ ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಧಾರ್ಮಿಕ ಮುಖಂಡರು
ಎಲ್ಲಾ ಸಮುದಾಯಗಳನ್ನು ಗೌರವಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಾಮರ್ಥ್ಯಕ್ಕಾಗಿ ವಿವಿಧ ಧಾರ್ಮಿಕ ಸಮುದಾಯಗಳಿಗೆ ಸೇರಿದ ಜನರು ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಸಮುದಾಯಗಳನ್ನು ಗೌರವಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಾಮರ್ಥ್ಯಕ್ಕಾಗಿ ವಿವಿಧ ಧಾರ್ಮಿಕ ಸಮುದಾಯಗಳಿಗೆ ಸೇರಿದ ಜನರು ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಸದ್ಭಾವನಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು, ವಿದ್ವಾಂಸರು, ಬೋಧಕರು ಮತ್ತು ಸಂಶೋಧಕರು ಭಾಗವಹಿಸಿದ್ದರು.ಆಸ್ಟ್ರೇಲಿಯಾದ ಸಂಸದ ಜೇಸನ್ ವುಡ್ ಎಲ್ಲ ಧಾರ್ಮಿಕ ಮುಖಂಡರು ಶಾಂತಿ ಮತ್ತು ಸೌಹಾರ್ದತೆಯ ಒಂದೇ ಧ್ವನಿಯೊಂದಿಗೆ ಒಟ್ಟಾಗಿರುವ ಅಸಾಧಾರಣ ಕಾರ್ಯಕ್ರಮ ಇದಾಗಿದೆ. ವಿವಿಧ ನಂಬಿಕೆ ನಾಯಕರು ವಿಶ್ವ ಶಾಂತಿಯ ಅಗತ್ಯದ ಬಗ್ಗೆ ಮಾತನಾಡುವುದನ್ನು ನೋಡುವುದು ಅದ್ಭುತವಾಗಿದೆ. ಪ್ರಪಂಚದಾದ್ಯಂತ ಸಕಾರಾತ್ಮಕ ಸಂದೇಶಗಳನ್ನು ಕಳುಹಿಸುವ ಧಾರ್ಮಿಕ ಮುಖಂಡರನ್ನು ಹೊಂದಿರುವುದು ಮುಖ್ಯ ಎಂದು ಹೇಳಿದ್ದಾರೆ. ವುಡ್ ಅವರಲ್ಲದೆ ಎನ್ಐಡಿ ಫೌಂಡೇಶನ್‌ನ ಮುಖ್ಯಸ್ಥ ಸರ್ದಾರ್ ಸತ್ನಾಮ್ ಸಿಂಗ್ ಸಂಧು, ಆಂಗ್ಲಿಕನ್ ಚರ್ಚ್‌ನ ಬಿಷಪ್ ಫಿಲಿಪ್ ಹಗ್ಗಿನ್ಸ್, ಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆಯ ಪ್ರತಿನಿಧಿ ಬ್ರಹ್ಮ ಸ್ಮರಣ್ ದಾಸ್, ಹಿಂದೂ ಕೌನ್ಸಿಲ್ ಆಸ್ಟ್ರೇಲಿಯಾದ ಸದಸ್ಯ ಅಭಿಜೀತ್ ಭಿಡೆ, ಅಹ್ಮದೀಯ ಮುಸ್ಲಿಂ ಸಮುದಾಯದ ಇಮ್ತಿಯಾಜ್ ನವೀದ್ ಅಹಮದ್, ವಿಕ್ಟೋರಿಯಾದ ಹಿಂದೂ ದೇವಾಲಯದ ಶ್ರೀನಿವಾಸನ್, ದಾವೂದಿ ಬೊಹ್ರಾ ಮುಸ್ಲಿಂ ನಾಯಕ ಮುಸ್ತಫಾ ಪೂನಾವಾಲಾ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.