AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Parliament New Building: ಪ್ರಧಾನಿ ಮೋದಿ ಕನಸಿನ ಸಂಸತ್ ಕಟ್ಟಡ- ಲೋಕಸಭೆ ಬಲ 848ಕ್ಕೆ ಹೆಚ್ಚಳ ಸಾಧ್ಯತೆ

Parliament New Building: ಪ್ರಧಾನಿ ಮೋದಿ ಕನಸಿನ ಸಂಸತ್ ಕಟ್ಟಡ- ಲೋಕಸಭೆ ಬಲ 848ಕ್ಕೆ ಹೆಚ್ಚಳ ಸಾಧ್ಯತೆ

ಕಿರಣ್​ ಐಜಿ
| Updated By: Digi Tech Desk|

Updated on:May 24, 2023 | 3:23 PM

Share

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಹೊಸ ಸಂಸತ್ ಭವನ ನಿರ್ಮಾಣ ಭರದಿಂದ ಸಾಗುತ್ತಿದೆ. ನೂತನ ಕಟ್ಟಡ ನಿರ್ಮಾಣವಾದ ಬಳಿಕ, ಲೋಕಸಭೆ ಬಲ 848ಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದಂತೆ, ಲೋಕಸಭೆಯಲ್ಲಿ 888 ಆಸನ ಸಾಮರ್ಥ್ಯದ ಹೊಸ ಸಂಸತ್ ಕಟ್ಟಡದ ನಿರ್ಮಾಣ ಮಾಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಹೊಸ ಸಂಸತ್ ಭವನ ನಿರ್ಮಾಣ ಭರದಿಂದ ಸಾಗುತ್ತಿದೆ. ನೂತನ ಕಟ್ಟಡ ನಿರ್ಮಾಣವಾದ ಬಳಿಕ, ಲೋಕಸಭೆ ಬಲ 848ಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದಂತೆ, ಲೋಕಸಭೆಯಲ್ಲಿ 888 ಆಸನ ಸಾಮರ್ಥ್ಯದ ಹೊಸ ಸಂಸತ್ ಕಟ್ಟಡದ ನಿರ್ಮಾಣ ಮಾಡಲಾಗುತ್ತಿದೆ. ಲೋಕಸಭೆ ಸದಸ್ಯರ ಸಂಖ್ಯೆ ಹೆಚ್ಚಿಸುವ ಕಾರಣದಿಂದ ಹೊಸ ಡಿಲಿಮಿಟೇಶನ್ ಆಯೋಗವನ್ನು ಸ್ಥಾಪಿಸುವತ್ತ ಗಮನ ಹರಿಸಿದೆ. ಲೋಕಸಭೆ ಸ್ಥಾನಗಳ ಸಂಖ್ಯೆಯನ್ನು 524 ರಿಂದ 545 ಕ್ಕೆ ಏರಿಸಿದಾಗ 1973 ರ 31ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸೀಟು ಪರಿಷ್ಕರಣೆಯನ್ನು ನಡೆಸಲಾಯಿತು. ಮುಂದಿನ 25 ವರ್ಷಗಳ ಕಾಲ ಲೋಕಸಭೆಯ ಬಲವನ್ನು ಉಳಿಸಿಕೊಳ್ಳಲು 1976ರಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಹೊಸ ಡಿಲಿಮಿಟೇಶನ್ ಆಯೋಗವು 2026 ರಲ್ಲಿ ಬರಲಿದೆ. ಹೊಸ ಆಯೋಗವನ್ನು ಸ್ಥಾಪಿಸುವ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಅದಕ್ಕೆ ಪೂರಕವಾಗಿ, ಪ್ರಧಾನಿ ಮೋದಿ ಕನಸಿನಂತೆ, ನೂತನ ಕಟ್ಟಡ ನಿರ್ಮಾಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಅಧಿಕ ಸಾಮರ್ಥ್ಯದ ಸಭಾ ಗೃಹ, ಸದನ ನಿರ್ಮಾಣವಾಗುತ್ತಿದೆ.

Published on: Apr 24, 2023 06:47 PM