Bangalore Tree Fall: ಮಲ್ಲೇಶ್ವರಂ ಎಂಟನೇ ಕ್ರಾಸ್​ನಲ್ಲಿ ಧರೆಗುರುಳಿದ ಭಾರೀ ಗಾತ್ರದ ಮರ

Bangalore Tree Fall: ಮಲ್ಲೇಶ್ವರಂ ಎಂಟನೇ ಕ್ರಾಸ್​ನಲ್ಲಿ ಧರೆಗುರುಳಿದ ಭಾರೀ ಗಾತ್ರದ ಮರ

ಆಯೇಷಾ ಬಾನು
|

Updated on:Apr 25, 2023 | 9:22 AM

ಬೆಂಗಳೂರಿನ ಮಲ್ಲೇಶ್ವರಂನ ಎಂಟನೇ ಕ್ರಾಸ್​ನಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ವೇಳೆಗೆ ಭಾರೀ ಗಾತ್ರದ ಮರ ರಸ್ತೆಗೆ ಬಿದ್ದಿದೆ. ಬೆಳಗಿನ ಜಾವ ಆದ ಪರಿಣಾಮ ಯಾವುದೇ ಜನ, ವಾಹನವಿರಲಿಲ್ಲ.

ಬೆಂಗಳೂರಿನ ಮಲ್ಲೇಶ್ವರಂ ಎಂಟನೇ ಕ್ರಾಸ್​ನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಘಟನೆ ನಡೆದಿದೆ. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಭಾರೀ ಗಾತ್ರದ ಮರವೊಂದು ರಸ್ತೆಗೆ ಬಿದ್ದಿದೆ. ಬೆಳಗಿನ ಜಾವ ಮರ ಉರುಳಿರುವ ಕಾರಣ ಯಾವುದೇ ಪ್ರಾಣಹಾನಿ, ಗಾಯ, ವಾಹನ ಜಖಂಗೊಂಡಿಲ್ಲ. ಸದ್ಯ ಬಿಬಿಎಂಪಿ‌ ಸಿಬ್ಬಂದಿ ಮರ ತೆರವು ಮಾಡುತ್ತಿದ್ದಾರೆ. ಆದ್ರೆ ಮರ ರಸ್ತೆಗೆ ಬಿದ್ದ ಕಾರಣ ವಾಹನ ಸವಾರರಿಗೆ, ಪಾದಾಚಾರಿಗಳಿಗೆ ಓಡಾಡಲು ಸಮಸ್ಯೆಯಾಗುತ್ತಿದೆ.

Published on: Apr 25, 2023 09:22 AM