Karnataka Assembly Polls: ಜಗದೀಶ್ ಶೆಟ್ಟರ್​ರನ್ನು ಕ್ಷಮಿಸಬೇಡಿ, ಅವರು ಸೋಲಲೇಬೇಕು ಅಂತ ಕಾರ್ಯಕರ್ತರಿಗೆ ಹೇಳಿದ ಅಮಿತ್ ಶಾ

Karnataka Assembly Polls: ಜಗದೀಶ್ ಶೆಟ್ಟರ್​ರನ್ನು ಕ್ಷಮಿಸಬೇಡಿ, ಅವರು ಸೋಲಲೇಬೇಕು ಅಂತ ಕಾರ್ಯಕರ್ತರಿಗೆ ಹೇಳಿದ ಅಮಿತ್ ಶಾ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 25, 2023 | 10:45 AM

ಇಡೀ ಬಿಜೆಪಿ ಸಮುದಾಯ ಬಿಜೆಪಿ ಜೊತೆಗಿರುವುದರಿಂದ ಶೆಟ್ಟರ್ ತಮ್ಮ ಸ್ವಯಂಕೃತ ಅಪರಾಧದಿಂದ ಸೋಲುವುದು ನಿಶ್ಚಿತ ಎಂದು ಅಮಿತ್ ಶಾ ಹೇಳಿದ್ಧಾರೆ.

ಬೆಂಗಳೂರು: ಬಿಜಪಿಗೆ ಮೋಸ ಮಾಡಿ ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿರುವ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಯಾವ ಕಾರಣಕ್ಕೂ ಪಕ್ಷದ ಕಾರ್ಯಕರ್ತರು ಮತ್ತು ಹುಬ್ಬಳ್ಳಿ ಮತದಾರರು ಕ್ಷಮಿಸಬಾರದು-ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಪಕ್ಷಕ್ಕೆ ಸಂಬಂಧಪಟ್ಟವರಿಗೆಲ್ಲ ನೀಡಿರುವ ಸ್ಪಷ್ಟ ಸಂದೇಶ ಮತ್ತು ದ್ಯೇಯ ವಾಕ್ಯ. ಚುನಾವಣಾ ರಣತಂತ್ರ (strategy) ಹೆಣೆಯುವಲ್ಲಿ ನಿಸ್ಸೀಮರೆನಿಸಿಕೊಂಡು ಚಾಣಕ್ಯನೆಂದು ಗುರುತಿಸಿಕೊಳ್ಳುವ ಅಮಿತ್ ಶಾ ಅವರಿಗೆ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಸೋಲಿಸುವುದು ಗುರಿಯಾಗಿದೆ. ಇಡೀ ಬಿಜೆಪಿ ಸಮುದಾಯ ಬಿಜೆಪಿ ಜೊತೆಗಿರುವುದರಿಂದ ಶೆಟ್ಟರ್ ತಮ್ಮ ಸ್ವಯಂಕೃತ ಅಪರಾಧದಿಂದ ಸೋಲುವುದು ನಿಶ್ಚಿತ ಎಂದು ಅಮಿತ್ ಶಾ ಹೇಳಿದ್ಧಾರೆ. ನಾಗ್ಪುರದಿಂದ ಒಂದು ತಂಡ ಹುಬ್ಬಳ್ಳಿಯಲ್ಲಿ ಶೆಟ್ಟರ್ ವಿರುದ್ಧ ಮತ್ತು ಬಿಜೆಪಿ ಅಭ್ಯರ್ಥಿ ಮಹೇಶ್ ತೆಂಗಿನಕಾಯಿ ಅವರ ಪ್ರಚಾರದಲ್ಲಿ ತೊಡಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ