Assembly Polls: ಪ್ರಧಾನಿ ನರೇಂದ್ರ ಮೋದಿ ಮಂಡ್ಯಗೆ ಹತ್ತು ಸಲ ಬಂದರೂ ಜೆಡಿಎಸ್ ಅವಕಾಶಗಳ ಮೇಲೆ ಪ್ರಭಾವ ಬೀರಲಾರರು: ಹೆಚ್ ಡಿ ಕುಮಾರಸ್ವಾಮಿ
ಅಸಲಿಗೆ ಪ್ರಧಾನ ಮಂತ್ರಿಯವರಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಕಾಮೆಂಟ್ ಮಾಡಲು ಸರಕಿಲ್ಲ, ಹೆಚ್ ಡಿ ದೇವೇಗೌಡರು ದೇಶದ ಪ್ರಧಾನಿಯಾಗಿ ಮತ್ತು ತಾವು ರಾಜ್ಯದ ಮುಖ್ಯಮಂತ್ರಿಯಾಗಿ ಸ್ವಚ್ಛ ಆಡಳಿತ ನೀಡಿರುವುದನ್ನು ಅವರು ನೋಡಿದ್ದಾರೆ ಎಂದು ಹೇಳಿದರು.
ಹಾಸನ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮಂಡ್ಯ ಜಿಲ್ಲೆಗೆ ಬಂದಿದ್ದೂ ಗೊತ್ತಿಲ್ಲ, ಹೋಗಿದ್ದೂ ಗೊತ್ತಿಲ್ಲ, ಅವರು ಇಲ್ಲಿಗೆ ಒಮ್ಮೆಯಲ್ಲ ಹತ್ತು ಸಲ ಬಂದು ಹೋದರೂ ಜೆಡಿಎಸ್ ಪಕ್ಷದ ಅವಕಾಶಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಪಕ್ಷದ ಧುರೀಣ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು. ಜಿಲ್ಲೆಯ ಹಿರಿಸಾವೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಅವರು, ಅಸಲಿಗೆ ಪ್ರಧಾನ ಮಂತ್ರಿಯವರಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಕಾಮೆಂಟ್ ಮಾಡಲು ಸರಕಿಲ್ಲ, ಹೆಚ್ ಡಿ ದೇವೇಗೌಡರು (HD Devegowda) ದೇಶದ ಪ್ರಧಾನಿಯಾಗಿ ಮತ್ತು ತಾವು ರಾಜ್ಯದ ಮುಖ್ಯಮಂತ್ರಿಯಾಗಿ ಸ್ವಚ್ಛ ಆಡಳಿತ ನೀಡಿರುವುದನ್ನು ಅವರು ನೋಡಿದ್ದಾರೆ ಎಂದು ಹೇಳಿದರು. ಪ್ರಧಾನ ಮಂತ್ರಿಗಳು ತಮ್ಮ ಬಣ್ಣದ ಮಾತುಗಳಿಂದ ಜನರನ್ನು ಇನ್ನು ಮರುಳು ಮಾಡಲಾರರು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ

