PMV EaS-E car: ಭರ್ಜರಿ ಮೈಲೇಜ್ ಪ್ರೇರಿತ ಪಿಎಂವಿ ಮೈಕ್ರೊ ಇವಿ ಕಾರು ಭಾರತದಲ್ಲಿ ಬಿಡುಗಡೆ

PMV EaS-E car: ಭರ್ಜರಿ ಮೈಲೇಜ್ ಪ್ರೇರಿತ ಪಿಎಂವಿ ಮೈಕ್ರೊ ಇವಿ ಕಾರು ಭಾರತದಲ್ಲಿ ಬಿಡುಗಡೆ

Praveen Sannamani
|

Updated on:Nov 18, 2022 | 6:40 PM

PMV EaS-E Microcar: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಭಾರೀ ಸದ್ದು ಮಾಡುತ್ತಿದ್ದು, ಸಾಂಪ್ರದಾಯಿಕ ವಾಹನಗಳಿಂತಲೂ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ಇ-ವಾಹನಗಳು ಭವಿಷ್ಯದಲ್ಲಿ ಹೊಸ ಸಂಚಲನ ಮೂಡಿಸಲಿವೆ. ಈ ನಿಟ್ಟಿನಲ್ಲಿ ಪರ್ಸನಲ್ ಮೊಬಿಲಿಟಿ ವೆಹಿಕಲ್ ಕಂಪನಿಯು ತನ್ನ ಹೊಸ ತಂತ್ರಜ್ಞಾನ ಪ್ರೇರಿತ ಮೈಕ್ರೊ ಇವಿ ಕಾರು ಬಿಡುಗಡೆ ಮಾಡಿದೆ.

ಪಿಎಂವಿ ಕಂಪನಿಯ ನಿರ್ಮಾಣದ ಹೊಸ ಮೈಕ್ರೊ ಇವಿ (PMV EaS-E Microcar) ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 4.79 ಲಕ್ಷ ಬೆಲೆ ಹೊಂದಿದೆ. ಹೊಸ ಕಾರಿನಲ್ಲಿ ಕಂಪನಿಯು 48ಬಿ ಬ್ಯಾಟರಿ ಜೋಡಣೆ ಮಾಡಿದ್ದು, ಇದು ಇದು ಪ್ರತಿ ಚಾರ್ಜ್ ಗೆ ಗರಿಷ್ಠ 200 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದಲ್ಲದೆ ಗ್ರಾಹಕರು ತಮ್ಮ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 120 ಕಿಮಿ ರೇಂಜ್, 160 ಕಿಮೀ ರೇಂಜ್ ಮತ್ತು 200 ಕಿಮೀ ರೇಂಜ್ ಆವೃತ್ತಿಗಳನ್ನು ಸಹ ಆಯ್ಕೆ ಮಾಡಬಹುದಾಗಿದೆ. ಇದು ಪ್ರತಿ ಗಂಟೆಗೆ ಗರಿಷ್ಠ 70 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದ್ದು, ಇದರೊಂದಿಗೆ ಹೊಸ ಇವಿ ಕಾರು 13 ಹಾರ್ಸ್ ಪವರ್ ಜೊತೆ 50 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಈ ಮೂಲಕ ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು 2023ರ ಮಧ್ಯಂತರದಲ್ಲಿ ಗ್ರಾಹಕರ ಕೈ ಸೇರುವ ನೀರಿಕ್ಷೆಯಿದೆ.

Published on: Nov 18, 2022 06:39 PM