ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಎಸಗಿದವರನ್ನು ನಾಳೆ ಮಧ್ಯಾಹ್ನ 12 ಗಂಟೆಯೊಳಗೆ ಬಂಧಿಸಬೇಕು: ಡಿಕೆ ಶಿವಕುಮಾರ
ಇದರಲ್ಲಿ ಭಾಗಿಯಾಗಿರುವವರನ್ನು ಶನಿವಾರ ಮಧ್ಯಾಹ್ನ 12 ಗಂಟೆಯೊಳಗೆ ಬಂಧಿಸದಿದ್ದರೆ ರಾಜ್ಯ ಚುನಾವಣಾ ಆಯೋಗವೂ ಇದರಲ್ಲಿ ಭಾಗಿಯಾಗಿದೆ ಎಂದರ್ಥ ಎಂದು ಡಿಕೆ ಶಿವಕುಮಾರ ಬೆಂಗಳೂರಲ್ಲಿ ಗುಡುಗಿದರು.
ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ (Voter Data Theft) ನಡೆದಿರುವ ಅಕ್ರಮದ ಆರೋಪವನ್ನು ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಇದರಲ್ಲಿ ಭಾಗಿಯಾಗಿರುವವರನ್ನು ಶನಿವಾರ ಮಧ್ಯಾಹ್ನ 12 ಗಂಟೆಯೊಳಗೆ ಬಂಧಿಸದಿದ್ದರೆ ರಾಜ್ಯ ಚುನಾವಣಾ ಆಯೋಗವೂ (State Election Commission) ಇದರಲ್ಲಿ ಭಾಗಿಯಾಗಿದೆ ಎಂದರ್ಥ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಬೆಂಗಳೂರಲ್ಲಿ ಇಂದು ಗುಡುಗಿದರು. ನಾಳೆ ಅರೆಸ್ಟ್ ಗಳು ನಡೆಯದಿದ್ದರೆ ನಾವು ದೆಹಲಿಗೆ ಹೋಗಿ ಮುಖ್ಯ ಚುನಾವಣಾ ಆಯೋಗದ ಕದ ತಟ್ಟುತ್ತೇವೆ ಎಂದ ಅವರು ಮಾನ್ಯ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು ಸುವೊ ಮೊಟು ಕೇಸ್ ದಾಖಲಿಸಿಕೊಂಡು ತನಿಖೆಗೆ ಆದೇಶ ನೀಡಬೇಕೆಂದು ಹೇಳಿದರು.
Latest Videos