ಯಾದಗಿರಿ: ಸುರಪುರ ಪಟ್ಟಣದಲ್ಲಿ ರಸ್ತೆಗಳ ಮೇಲೆ ಬೇಕಾಬಿಟ್ಟಿ ವಾಹನಗಳ ಪಾರ್ಕಿಂಗ್, ರಸ್ತೆಗಳಿದು ಕಾರ್ಯಾಚರಣೆ ನಡೆಸಿದ ಪೊಲೀಸರು
ಅಂಗಡಿಗಳ ಮಾಲೀಕರು ಬೀದಿ ವ್ಯಾಪಾರಿಗಳ ಹಾಗೆ ಫುಟ್ ಪಾತ್ ಗಳ ಮೇಲೂ ಸಾಮಾನು ಇಟ್ಟಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪೊಲೀಸರು ಪಾದಾಚಾರಿ ರಸ್ತೆಯನ್ನು ತೆರವು ಮಾಡಿಸಿ ವ್ಯಾಪಾರಸ್ಥರಿಗೆ ಗದರಿದ್ದಾರೆ. ಇದು ಸಾಮಾನ್ಯವಾಗಿ ಎಲ್ಲ ಊರುಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಲ್ಲಿ ರಸ್ತೆ ಬದಿಯಿರುವ ಅಂಗಡಿಗಳ ಮಾಲೀಕರು, ಪಾವ್ಮೆಂಟ್ ಸ್ಥಳವನ್ನು ತಮ್ಮಪ್ಪನ ಅಸ್ತಿಯೆಂಬಂತೆ, ಅದರ ಮೇಲೆ ಸಾಮಾನುಇಲ್ಲವೇ ಬೋರ್ಡ್ ಗಳನ್ನು ಇಟ್ಟಿರುತ್ತಾರೆ.
ಯಾದಗಿರಿ: ಜಿಲ್ಲೆಯ ಸುರಪುರ ಪಟ್ಟಣ (Shorapur town) ಗಾತ್ರದಲ್ಲಿ ದೊಡ್ಡದೇನೂ ಅಲ್ಲ ಊರಲ್ಲಿನ ರಸ್ತೆಗಳು ಸಹ ಕಿರಿದಾಗಿವೆ. ಮಾರ್ಕೆಟ್ ಪ್ರದೇಶದಲ್ಲಿ ಸಾಲು ಸಾಲು ಅಂಗಡಿಗಳಿವೆ ಆದರೆ ಪಾರ್ಕಿಂಗ್ ವ್ಯವಸ್ಥೆಯಿಲ್ಲದ (parking facility) ಕಾರಣ ಖರೀದಿಗೆ ಬರುವ ವಾಹನ ಸವಾರರು ಅಂಗಡಿಗಳ ಮುಂದುಗಡೆಯೇ ವಾಹನಗಳನ್ನು ಪಾರ್ಕ್ ಮಾಡುವವುದರಿಂದ ರಸ್ತೆ ಮತ್ತಷ್ಟು ಕಿರಿದುಗೊಂಡು ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ತೊಂದರೆಯಅಗುತ್ತಿರುವಿದನ್ನು ಮನಗಂಡು ಇಲ್ಲಿನ ಉಪ ಪೊಲೀಸ್ ವರಿಷ್ಠಾಧಿಕಾರಿ (Dy SP) ತಮ್ಮ ಸಿಬ್ಬಂದಿಯೊಂದಿಗೆ ರಸ್ತೆಗಿಳಿದು ಅಂಗಡಿಗಳ ಮಾಲೀಕರು ಮತ್ತು ವಾಹನ ಸವಾರರಿಗೆ ತಾಕೀತು ಮಾಡಿದ್ದಾರೆ. ಅಂಗಡಿಗಳ ಮಾಲೀಕರು ಬೀದಿ ವ್ಯಾಪಾರಿಗಳ ಹಾಗೆ ಫುಟ್ ಪಾತ್ ಗಳ ಮೇಲೂ ಸಾಮಾನು ಇಟ್ಟಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪೊಲೀಸರು ಪಾದಾಚಾರಿ ರಸ್ತೆಯನ್ನು ತೆರವು ಮಾಡಿಸಿ ವ್ಯಾಪಾರಸ್ಥರಿಗೆ ಗದರಿದ್ದಾರೆ. ಇದು ಸಾಮಾನ್ಯವಾಗಿ ಎಲ್ಲ ಊರುಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಲ್ಲಿ ರಸ್ತೆ ಬದಿಯಿರುವ ಅಂಗಡಿಗಳ ಮಾಲೀಕರು, ಪಾವ್ಮೆಂಟ್ ಸ್ಥಳವನ್ನು ತಮ್ಮಪ್ಪನ ಅಸ್ತಿಯೆಂಬಂತೆ, ಅದರ ಮೇಲೆ ಸಾಮಾನುಇಲ್ಲವೇ ಬೋರ್ಡ್ ಗಳನ್ನು ಇಟ್ಟಿರುತ್ತಾರೆ. ಪೊಲೀಸರೇ ಅವರಿಗೆ ಬುದ್ಧಿ ಕಲಿಸಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ

