Karnataka Assembly Polls; ದಾವಣಗೆರೆ ಹೆಬ್ಬಾಳ ಟೋಲ್ ಬಳಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ರೂ. 39 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಪೊಲೀಸ್ ವಶಕ್ಕೆ
ಮೂಲಗಳ ಪ್ರಕಾರ ಚುನಾವಣಾಧಿಕಾರಿ ಅಶ್ವಥ್ ಕಾರಿನ ತಪಾಸಣೆ ನಡೆಸಿ ಬೆಳ್ಳಿವಸ್ತುಗಳ ಜೊತೆ ಕಾರನ್ನೂ ಸೀಜ್ ಮಾಡಿದ್ದಾರೆ.
ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾವಣೆ (Assembly polls) ರಂಗೇರುತಿದ್ದಂತೆಯೇ, ದಾಖಲಯಿಲ್ಲದೆ ಸಾಗಿಸುವ ಹಣ ಮತ್ತು ವಸ್ತುಗಳನ್ನು ಪೊಲೀಸ ಮತ್ತು ಚುನಾವಣಾಧಿಕಾರಿಗಳು ಜಪ್ತಿ ಮಾಡುತ್ತಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಹೆಬ್ಬಾಳ ಟೋಲ್ (Hebbal toll plaza) ಬಳಿ ದಾಖಲೆಯಿಲ್ಲದೆ ಐಷಾರಾಮಿ ಕಾರೊಂದರಲ್ಲಿ ಸಾಗಿಸಲಾಗುತ್ತಿದ್ದ ರೂ. 39 ಲಕ್ಷ ಮೌಲ್ಯದ 66ಕೆಜಿ ಬೆಳ್ಳಿಯ ಸಾಮಾನುಗಳನ್ನು ಜಪ್ತು ಮಾಡಲಾಗಿದೆ. ಕಾರು ಮಹಾರಾಷ್ಟ್ರ ರಾಜ್ಯದಲ್ಲಿ ನೋಂದಣಿಯಾಗಿದೆ. ಮೂಲಗಳ ಪ್ರಕಾರ ಚುನಾವಣಾಧಿಕಾರಿ ಅಶ್ವಥ್ (Ashwath) ಕಾರಿನ ತಪಾಸಣೆ ನಡೆಸಿ ಬೆಳ್ಳಿವಸ್ತುಗಳ ಜೊತೆ ಕಾರನ್ನೂ ಸೀಜ್ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ