ದರ್ಶನ್ ರಾಜಾತಿಥ್ಯ ಪೋಟೋ ಹೊರಬಿದ್ದ 3 ದಿನ ನಂತರ ಪೊಲೀಸ್ ಆಯುಕ್ತ ದಯಾನಂದ ಜೈಲಿಗೆ ಭೇಟಿ

|

Updated on: Aug 27, 2024 | 6:02 PM

ದರ್ಶನ್​ಗೆ ಜೈಲಲ್ಲಿ ಸಿಗುತ್ತಿರುವ ರಾಜಾತಿಥ್ಯ ಹಿನ್ನೆಲೆಯಲ್ಲಿ ಸರ್ಕಾರ ಒಂಭತ್ತು ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ ಮತ್ತು ಚಿತ್ರನಟನನ್ನು ಬೇರೆ ಜೈಲಿಗೆ ಕಳಿಸುವ ತಯಾರಿ ನಡೆಸಿದೆ. ಆದರೆ, ಸಿಎಂ ಅಗಲೀ ಗೃಹ ಸಚಿವರಾಗಲೀ ದರ್ಶನ್ ಶಿಫ್ಟ್ ಮಾಡುವುದನ್ನು ಖಚಿತವಾಗಿ ಹೇಳುತ್ತಿಲ್ಲ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿತ್ರನಟ ದರ್ಶನ್ ಗೆ ಜೈಲಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿರುವ ಫೋಟೋ ಬೆಳಕಿಗೆ ಮೂರು ದಿನಗಳ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಇಂದು ಆನೇಕಲ್​ನಲ್ಲಿರುವ ಸೆಂಟ್ರಲ್ ಜೈಲಿಗೆ ಭೇಟಿ ನೀಡಿದರು. ಈಗಾಗಲೇ ವರದಿಯಾಗಿರುವಂತೆ ಗೃಹಸಚಿವ ಜಿ ಪರಮೇಶ್ವರ್ ಫೋಟೋ ಸಾರ್ವಜನಿಕಗೊಂಡ ಮರುದಿನ ಜೈಲಿಗೆ ಭೇಟಿ ನೀಡಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Darshan Arrest: ದರ್ಶನ್ ಬಂಧನ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಹೇಳಿದ್ದೇನು? ವಿಡಿಯೋ ನೋಡಿ