ದರ್ಶನ್​ ರೀತಿ ನಾನು ಕೂಡ ಸಹವಾಸ ದೋಷದಿಂದ ಜೈಲಿಗೆ ಹೋದೆ: ಘಟನೆ ಮೆಲುಕು ಹಾಕಿದ ಸಂಜನಾ

ಡ್ರಗ್ಸ್​ ಕೇಸ್​ ಆರೋಪದಲ್ಲಿ ಸಂಜನಾ ಗಲ್ರಾನಿ ಅವರು ಜೈಲಿಗೆ ಹೋಗಿದ್ದರು. ಈಗ ನಟ ದರ್ಶನ್​ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದು ಸಖತ್​ ಸುದ್ದಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಜನಾ ಗಲ್ರಾನಿ ಅವರು ತಮ್ಮ ಜೈಲುವಾಸದ ದಿನಗಳನ್ನು ಮೆಲುಕು ಹಾಕಿದ್ದಾರೆ. ದರ್ಶನ್​ ರೀತಿ ತಾವು ಕೂಡ ಜೈಲಿಗೆ ಹೋಗಲು ಸಹವಾಸ ದೋಷವೇ ಕಾರಣ ಎಂದಿದ್ದಾರೆ ನಟಿ ಸಂಜನಾ.

ದರ್ಶನ್​ ರೀತಿ ನಾನು ಕೂಡ ಸಹವಾಸ ದೋಷದಿಂದ ಜೈಲಿಗೆ ಹೋದೆ: ಘಟನೆ ಮೆಲುಕು ಹಾಕಿದ ಸಂಜನಾ
| Updated By: ಮದನ್​ ಕುಮಾರ್​

Updated on: Aug 27, 2024 | 4:56 PM

‘ದರ್ಶನ್​ ರೀತಿ ನನ್ನದು ಕೂಡ ಪೂರ್ತಿಯಾಗಿ ಸಹವಾಸದ ದೋಷ. ಅವರು ಎಲ್ಲೋ ಇದ್ದಾರೆ, ಮರ್ಡರ್​ ಎಲ್ಲೋ ಆಗಿದೆ. ಅವರು ಒಳಗೆ ಹೋಗಿದ್ದಾರೆ. ನಾನು ರಾಕಿ ಬ್ರದರ್​ ಎಂದು ನಂಬಿದ್ದ ವ್ಯಕ್ತಿ ಅರೆಸ್ಟ್​ ಆಗಿದ್ದ. ಆಗ ನನ್ನ ಹೆಸರು ಅದರಲ್ಲಿ ಸೇರಿಸಿದರು. ತನಿಖೆಗೆ ಅಂತ ಕರೆದುಕೊಂಡು ಹೋದರು. ನಮ್ಮ ಮನೆಯಲ್ಲಿ ಒಂದು ಸಿಗರೇಟ್​, ಬಿಯರ್ ಬಾಟಲ್​ ಕೂಡ ಸಿಕ್ಕಿರಲಿಲ್ಲ’ ಎಂದು ಸಂಜನಾ ಗಲ್ರಾನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us