ಪೊಲೀಸರು ವಶಕ್ಕೆ ಪಡೆದಾಗ ಏಯ್ ಅಂದ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಪ್ರತಿಭಟನೆಕಾರರನ್ನು ಪೊಲೀಸರು ವಶಕ್ಕೆ ಪಡೆಯುವಾಗ ಮಾತಿನ ಯುದ್ಧ ನಡೆಯೋದು ಹೊಸದಲ್ಲ ಮತ್ತು ಮೊದಲ ಸಲವೂ ಅಲ್ಲ. ಪೊಲೀಸರು ತಮ್ಮ ಮೇಲಧಿಕಾರಿಗಳಿಂದ ಬಂದ ಆದೇಶವನ್ನು ಪಾಲಿಸುತ್ತಾರೆ. ಅವರ ಮೇಲಧಿಕಾರಿಗಳ ಮೇಲೆ ಸರಕಾರದ ಪ್ರತಿನಿಧಿಗಳ ಒತ್ತಡವಿರುತ್ತದೆ!
ಬೆಂಗಳೂರು: ನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನವನ್ನು ಬಿಜೆಪಿ ಶಾಸಕರು ಮತ್ತು ಮುಖಂಡರು ಇವತ್ತು ಬೆಳಗ್ಗೆ ಮಾಡಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಂದು ಹಗರಣ ನಡೆಯುತ್ತಿದೆ ಎಲ್ಲೆಡೆ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಯ ಭಾಗವಾಗಿ ಬಿಜೆಪಿ ನಾಯಕರು ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದಾಗ ವಿರೋಧ ಪಕ್ಷದ ನಾಯಕ ಅರ್ ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಇನ್ನೂ ಹಲವಾರು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಶಾಸಕರನ್ನು ಬಸ್ ಹತ್ತಿಸುವಾಗ ಪೊಲೀಸ್ ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಅಸಲಿಗೆ ಬಸ್ಸಿನ ಬಾಗಿಲಲ್ಲಿ ನಿಂತಿದ್ದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ನೆಲದ ಮೇಲಿದ್ದ ಒಬ್ಬ ಪೊಲೀಸ್ ಗೆ ಏಯ್ ಅನ್ನುತ್ತಾರೆ. ಇದರಿಂದ ಕೆರಳುವ ಪೊಲೀಸ್ ಶಾಸಕನ ಜೊತೆ ಮಾತಿನ ಜಗಳಕ್ಕೆ ಬೀಳುತ್ತಾರೆ. ಪೊಲೀಸರು ಹೋಗಪ್ಪ ಬಾರಪ್ಪ ಅಂತ ಹೇಳಿದರೆ ಕೇಳಿಸಿಕೊಂಡು ಸುಮ್ಮನಿರಬೇಕಾ? ಎಂದು ಕಾಮತ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಮಹಾ ಪ್ಲ್ಯಾನ್