‘ಕಾಮಿಡಿ ಕಿಲಾಡಿಗಳು’ ನಟ ಚಂದ್ರಶೇಖರ್ ಸಿದ್ದಿ ಸಾವಿಗೆ ಕಾರಣ ಏನು? ವಿವರ ನೀಡಿದ ಪೊಲೀಸ್
ನಟ ಚಂದ್ರಶೇಖರ್ ಸಿದ್ದಿ ಅವರು ‘ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಅವರು ಆತ್ಮಹತ್ಯೆ ಮಾಡಿಕೊಂಡ ಶಾಕಿಂಗ್ ಸುದ್ದಿ ಕೇಳಿಬಂತು. ಅವರ ಸಾವಿನ ಕಾರಣ ಏನು ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.
ನಟ ಚಂದ್ರಶೇಖರ್ ಸಿದ್ದಿ ಅವರು ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಶೋ ಮೂಲಕ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಅವರು ಆತ್ಮಹತ್ಯೆ ಮಾಡಿಕೊಂಡ ಶಾಕಿಂಗ್ ಸುದ್ದಿ ಕೇಳಿಬಂತು. ಅವರ ಸಾವಿನ ಕಾರಣ ಏನು ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಚಂದ್ರಶೇಖರ್ ಸಿದ್ದಿ (Chandrashekhar Siddi) ತಾಯಿ ದೂರು ನೀಡಿದ್ದಾರೆ. ‘ನಿಖರ ಕಾರಣವನ್ನು ಇನ್ನೂ ತಿಳಿಯಬೇಕಿದೆ. 2-3 ತಿಂಗಳ ಹಿಂದೆ ಗಂಡ-ಹೆಂಡತಿ ನಡುವೆ ಜಗಳ ಆಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅವಕಾಶಗಳು ಸಿಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬುದರ ಬಗ್ಗೆ ಇನ್ನೂ ವಿಚಾರಣೆ ಮಾಡಬೇಕಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
