Karnataka Assembly Polls: ಹೆಚ್ ಡಿ ಕುಮಾರಸ್ವಾಮಿಯ ಹೆಲಿಕಾಪ್ಟರ್ ಕಾಯುತ್ತಿದ್ದ ಪೊಲೀಸರು ಅದರ ಮುಂದೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡರು!
ಕುಮಾಸ್ವಾಮಿ ಚಾಪರ್ ನಿಂದ ಇಳಿದು ಸಮಾವೇಶಕ್ಕೆ ಹೋದಾಗ ಅದನ್ನು ಕಾಯಲು ನಿಂತಿದ್ದ ಪೊಲೀಸರು ಉಕ್ಕಿನ ಹಕ್ಕಿಯೊಂದಿಗೆ ಮನಸಾರೆ ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ,
ಕೋಲಾರ: ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಇಲ್ಲಿರುವ ಪೊಲೀಸರಿಗೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಮುಳಬಾಗಿಲಿನ ಶಿನೆಗೇನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಪಂಚರತ್ನ ಯಾತ್ರೆ (Pancharatna Yatre) ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದಾಗ ಏನ್ ಮಾಡ್ತಾ ಇದ್ರಿ ಅಂತ ಕೇಳಿದರೆ, ಸರ್ ಹೆಲಿಕಾಪ್ಟರ್ (helicopter) ಮುಂದೆ ನಿಂತು ಸೆಲ್ಫೀ ತಗೊಳ್ತಾ ಇದ್ವಿ, ಅಂತ ಇವರು ಹೇಳಬಹುದೆ? ತಮಾಷೆಗೆ ಹೇಳಿದ್ದು ಮಾರಾಯ್ರೇ. ವೃತ್ತಿಯಲ್ಲಿ ಪೊಲೀಸರರಾದರೇನು? ಜನ ಸಾಮಾನ್ಯರಂತೆ ಅವರಿಗೂ ಸೆಲ್ಫೀ ಗೀಳು ಇರುತ್ತೆ ತಾನೇ? ಹಾಗಾಗಿ ಕುಮಾಸ್ವಾಮಿ ಚಾಪರ್ ನಿಂದ ಇಳಿದು ಸಮಾವೇಶಕ್ಕೆ ಹೋದಾಗ ಅದನ್ನು ಕಾಯಲು ನಿಂತಿದ್ದ ಪೊಲೀಸರು ಉಕ್ಕಿನ ಹಕ್ಕಿಯೊಂದಿಗೆ ಮನಸಾರೆ ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

