ಹಿಂದೂ ಕಾರ್ಯಕರ್ತರ ಪ್ರತಿಭಟನೆ; ಮಂಡ್ಯ ಶಾಸಕ ರವಿ ಗಣಿಗ ಮನೆಗೆ ಪೊಲೀಸ್ ಭದ್ರತೆ

|

Updated on: Feb 09, 2024 | 12:28 PM

ಶಾಸಕನ ಅಣತಿ ಮೇರೆಗೆ ಧ್ವಜ ತೆರವುಗೊಳಿಸಲಾಯಿತು ಎಂದು ಕಾರ್ಯಕರ್ತರು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಹಿಂಸಾಚಾರದಂಥ ಘಟನೆ ಮರುಕಳಿಸಿ, ಶಾಸಕನ ಮನೆ ಮುಂದೆ ಪ್ರತಿಭಟನೆಕಾರರು ದಾಂಧಲೆ ನಡೆಸುವ ಸಾಧ್ಯತೆ ಇರುವುದರಿಂದ ಪೊಲೀಸರನ್ನು ನಿಯೋಜಿಸಲಾಗಿದೆ.

ಮಂಡ್ಯ: ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಕುಮಾರ್ ಗೌಡ ಗಣಿಗ (Ravi Ganiga) ಮನೆಗೆ ಪೊಲೀಸ್ ಭದ್ರತೆ (police Security) ಕಲ್ಪಿಸಲಾಗಿದೆ. ಯಾಕೆ ಅನ್ನೋದು ಕನ್ನಡಿಗರಿಗೆ ಗೊತ್ತಿರುವ ಸಂಗತಿಯೇ. ಕಳೆದ ತಿಂಗಳು ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ (Hanuma Flag Row) ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ಮತ್ತು ಕೆರಗೋಡು ಬಂದ್ ಗೆ ಕರೆ ನೀಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆರಗೋಡುನಿಂದ ಮಂಡ್ಯ ನಗರದವರೆಗೆ ಬೈಕ್ ರ‍್ಯಾಲಿಯನ್ನು ಸಹ ಕಾರ್ಯಕರ್ತರು ಆಯೋಜಿಸಿದ್ದಾರೆ. ನಿಮಗೆ ನೆನಪಿರಬಹುದು, ಕೆರಗೋಡು ಹನುಮ ಧ್ವಜ ವಿವಾದ ಬೆಳಕಿಗೆ ಬಂದ ದಿನ ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಮಂಡ್ಯ ಮತ್ತು ಕೆರಗೋಡುನಲ್ಲಿ ಪಾದಯಾತ್ರೆ ನಡೆಸಿದಾಗ ಕೆಲ ಕಿಡಿಗೇಡಿಗಳು ರವಿ ಗಣಿಗ ಅವರ ಫ್ಲೆಕ್ಸ್ ಗಳನ್ನು ಹರಿದು ಹಾಕಿದ್ದರು. ಶಾಸಕನ ಅಣತಿ ಮೇರೆಗೆ ಧ್ವಜ ತೆರವುಗೊಳಿಸಲಾಯಿತು ಎಂದು ಕಾರ್ಯಕರ್ತರು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಹಿಂಸಾಚಾರದಂಥ ಘಟನೆ ಮರುಕಳಿಸಿ, ಶಾಸಕನ ಮನೆ ಮುಂದೆ ಪ್ರತಿಭಟನೆಕಾರರು ದಾಂಧಲೆ ನಡೆಸುವ ಸಾಧ್ಯತೆ ಇರುವುದರಿಂದ ಪೊಲೀಸರನ್ನು ನಿಯೋಜಿಸಲಾಗಿದೆ. ರವಿ ಗಣಿಗ ನಿವಾಸದ ಮುಂದೆ ಪೊಲೀಸ್ ಕಾವಲನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on