ಚನ್ನಪಟ್ಟಣ ಉಪ ಚುನಾವಣೆ: ಪಕ್ಷದ ಶಾಲು ಹೊದ್ದು ಮತಗಟ್ಟೆ ಬಳಿ ಸುಳಿದಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ದೂರ ಕಳಿಸಿದ ಪೊಲೀಸರು
ಚನ್ನಪಟ್ಟಣ ಉಪ ಚುನಾವಣೆ: ಜೆಡಿಎಸ್ ಪಕ್ಷದ ಒಬ್ಬ ಮಹಿಳಾ ಕಾರ್ಯಕರ್ತೆ ಕೂಡ ಪಕ್ಷದ ಶಾಲು ಹೊದ್ದು ಓಡಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರನ್ನು ಸಹ ಪೊಲೀಸರು ಮತಗಟ್ಟೆ ವ್ಯಾಪ್ತಿಯಿಂದ ದೂರ ಕಳಿಸುತ್ತಾರೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ನಡೆಯುತ್ತಿರುವ ಮತದಾನ ಕಾವೇರುತ್ತಿದೆ. ಜನ ಮನೆಗಳಿಂದ ಹೊರಬಂದು ವೋಟು ನೀಡುತ್ತಿದ್ದಾರೆ. ಕ್ಷೇತ್ರದ ಅಪ್ಪಗೆರೆ ಮತಗಟ್ಟೆ ಸಂಖ್ಯೆ 148ರಲ್ಲಿ ವೋಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲ ಸ್ಥಳೀಯ ಕಾಂಗ್ರೆಸ್ ಮುಖಂಡರು ಪಕ್ಷದ ಶಾಲು ಹೊದ್ದು ಸುಳಿದಾಡುತ್ತಿದ್ದರು. ಅವರನ್ನು ಗಮನಿಸಿದ ಪೊಲೀಸರು ಕೂಡಲೇ ಮತಗಟ್ಟೆಯಿಂದ ದೂರ ಕಳಿಸುವ ಕೆಲಸ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka ByPoll: ಚನ್ನಪಟ್ಟಣದಲ್ಲಿ ಆಕರ್ಷಣೆಯ ಕೇಂದ್ರವಾದ ಸಾಂಪ್ರದಾಯಿಕ ಗೊಂಬೆ ಮತಗಟ್ಟೆ
Latest Videos