ಬೆಂಬಲಿಗರನ್ನು ಜೊತೆಗೆ ಬಿಡದ್ದಕ್ಕೆ ಸಿಎಂ ನಿವಾಸದ ಬಳಿ ಪೊಲೀಸರ ಮೇಲೆಯೇ ಶಾಸಕ ಕೊತ್ತೂರು ಮಂಜುನಾಥ್ ಗರಂ
ಶಾಸಕ ಕೊತ್ತೂರು ಮಂಜುನಾಥ್ ಅವರು ಸಿಎಂ ಡಿ.ಕೆ. ಶಿವಕುಮಾರ್ ಭೇಟಿಗಾಗಿ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಪೊಲೀಸರು ಮಂಜುನಾಥ್ ಅವರ ಬೆಂಬಲಿಗರನ್ನು ಒಳಗೆ ಬಿಡಲು ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ಮಂಜುನಾಥ್, ತನ್ನೊಂದಿಗೆ ಬಂದ 100 ಜನರನ್ನೂ ಒಳಗೆ ಬಿಡಬೇಕು ಎಂದು ಪೊಲೀಸರಿಗೆ ತರಾಟೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಬೆಂಗಳೂರು, ಅಕ್ಟೋಬರ್ 05: ಸಿಎಂ ಡಿ.ಕೆ. ಶಿವಕುಮಾರ್ ಭೇಟಿಗಾಗಿ ಶಾಸಕ ಕೊತ್ತೂರು ಮಂಜುನಾಥ್ ಅವರು ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರೊಂದಿಗೆ ಸಾಕಷ್ಟು ಸಂಖ್ಯೆಯ ಬೆಂಬಲಿಗರು ಕೂಡ ಇದ್ದರು. ಆದರೆ, ನಿವಾಸದ ಹೊರಗಿದ್ದ ಪೊಲೀಸರು ಕೊತ್ತೂರು ಮಂಜುನಾಥ್ ಅವರನ್ನು ಮಾತ್ರ ಒಳಗೆ ಬಿಡಲು ಸಿದ್ಧರಾದರು. ಆದರೆ ಅವರ ಜೊತೆ ಬಂದಿದ್ದ ಬೆಂಬಲಿಗರನ್ನು ಒಳಗೆ ಬಿಡಲು ನಿರಾಕರಿಸಿದರು. ಪೊಲೀಸರ ಈ ನಡೆಗೆ ಶಾಸಕ ಕೊತ್ತೂರು ಮಂಜುನಾಥ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಾನು ಬಂದರೂ ಬಿಡಬೇಕು, ನನ್ನ ಜೊತೆ ಹತ್ತು ಜನ ಬಂದರೂ ಬಿಡಬೇಕು, ನೂರು ಜನ ಬಂದರೂ ಕೂಡ ಒಳಗಡೆ ಬಿಡಬೇಕು ಎಂದು ಖಾರವಾಗಿ ಹೇಳಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಪೊಲೀಸರಿಗೆ ಗದರಿಲ್ಲ. ನನ್ ಜೊತೆ ಬಂದಿರೋರನ್ನ ಬಿಡಿ ಎಂದೆ. ನೂರು ಜನ ಎಂದು ಹೇಳಿಲ್ಲ. ಮೂರು ಜನ ಅಂದಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
