Betting on candidates: ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಎರಡು ದಿನ ಬಾಕಿಯಿರುವಾಗಲೇ ಮೈಸೂರಲ್ಲಿ ಜೋರಾಯ್ತು ರಾಜಕೀಯ ಬೆಟ್ಟಿಂಗ್!

ಅರುಣ್​ ಕುಮಾರ್​ ಬೆಳ್ಳಿ

Updated on: May 11, 2023 | 7:08 PM

ವಿಡಿಯೋ ನೋಡುತ್ತಿದ್ದರೆ ರಾಜಕೀಯ ಬೆಟ್ಟಿಂಗ್ ಲೀಗಲೈಸ್ ಮಾಡಲಾಗಿದೆಯಾ ಅಂತ ಶಂಕೆ ಮೂಡುತ್ತದೆ.

ಮೈಸೂರು: ಬೆಟ್ಟಿಂಗ್ (betting) ಮತ್ತು ರಾಜಕಾರಣದ ನಡುವೆ ಎಲ್ಲಿಯ ಸಂಬಂಧ ಅಂತ ನೀವು ಅಂತ ಅಂದುಕೊಳ್ಳುತ್ತಿದ್ದರೆ ಈ ವಿಡಿಯೋ ತಪ್ಪದೆ ನೋಡಿ. ಇಲ್ಲೊಬ್ಬ ಯುವಕ ಭಾರೀ ಜೋಷಲ್ಲಿದ್ದಾನೆ. ಅವನ ಕೈಯಲ್ಲಿರುವ ಹಣವೆಷ್ಟು ಗೊತ್ತಾ? ಬರೋಬ್ಬರಿ ರೂ. 5 ಲಕ್ಷ ಮಾರಾಯ್ರೇ! ಜಿಲ್ಲೆಯ ಕೆ ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ ರವಿಶಂಕರ್ (D Ravishankar) ಗೆಲ್ಲುತ್ತಾರೆ ಅಂತ ಅಷ್ಟು ಹಣ ಬಾಜಿಕಟ್ಟಲು ರೆಡಿಯಾಗಿದ್ದಾನೆ. ಅತನ ಎಣಿಕೆಯ ಪ್ರಕಾರ ಹಾಲಿ ಶಾಸಕ ಮತ್ತು ಜೆಡಿಎಸ್ ಅಭ್ಯರ್ಥಿ ಸಾ ರಾ ಮಹೇಶ್ (Sa Ra Mahesh) ಸೋಲುತ್ತಾರೆ. ಹೀಗೆ ಬಹಿರಂಗವಾಗಿ ಬೆಟ್ಟಿಂಗ್ ನಲ್ಲಿ ಈ ಯುವಕ ಮತ್ತು ಅವನ ಎದುರಾಳಿ ಮಾತ್ರ ತೊಡಗಿಲ್ಲ, ಇನ್ನೂ ಸಾಕಷ್ಟು ಇಲ್ಲಿದ್ದಾರೆ. ವಿಡಿಯೋ ನೋಡುತ್ತಿದ್ದರೆ ರಾಜಕೀಯ ಬೆಟ್ಟಿಂಗ್ ಲೀಗಲೈಸ್ ಮಾಡಲಾಗಿದೆಯಾ ಅಂತ ಶಂಕೆ ಮೂಡುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.