ರಾಜ್ಯದಲ್ಲಿ ಮತದಾರರಿಗೆ ಉಡುಗೊರೆ ಹಂಚುವ ಕಾರ್ಯವನ್ನು ಪಕ್ಷಗಳು ಈಗಾಗಲೇ ಆರಂಭಿಸಿವೆ
ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮೊದಲೇ ‘ಹಂಚುವ’ ಕೆಲಸಗಳನ್ನು ಮಾಡಿ ಮುಗಿಸುವ ಇರಾದೆ ಪಕ್ಷಗಳಿಗಿರುವಂತಿದೆ.
ಬೆಂಗಳೂರು: ರಾಜ್ಯ ವಿಧಾನ ಸಭೆಗೆ ಚುನಾವಣೆ (assembly polls) ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಜನರಿಗೆ ಉಡುಗೊರೆಗಳನ್ನು ನೀಡಿ ತಮ್ಮತ್ತ ಸೆಳೆಯುವ ಕೆಲಸಕ್ಕಿಳಿದಿವೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಮತದಾರ ಮನಗೆಲ್ಲುವ ಪ್ರಯತ್ನವಾಗಿ ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಬೆಳ್ಳಿ ವಸ್ತುಗಳನ್ನು ವಿತರಿಸುತ್ತಿದ್ದರೆ ಜೆಡಿ(ಎಸ್) ನಾಯಕರು ಸೀರೆಗಳನ್ನು ಹಂಚುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮೊದಲೇ ‘ಹಂಚುವ’ ಕೆಲಸಗಳನ್ನು ಮಾಡಿ ಮುಗಿಸುವ ಇರಾದೆ ಪಕ್ಷಗಳಿಗಿರುವಂತಿದೆ.