ನಾನೇ 5 ವರ್ಷ ಸಿಎಂ ಅಂತ ಸಿದ್ದರಾಮಯ್ಯ ಹೇಳುವ ಸಂದರ್ಭ ಸೃಷ್ಟಿಯಾಗಿದ್ದು ಅನಾರೋಗ್ಯಕರ ಬೆಳವಣಿಗೆ: ಎಸ್ ಎಂ ಕೃಷ್ಣ, ಹಿರಿಯ ಮುತ್ಸದ್ದಿ
ರಾಜ್ಯ ರಾಜಕಾರಣದ ಬಗ್ಗೆ ಮಾತಾಡಿದ ಅವರು ಯಾವುದೇ ಸಂದರ್ಭದಲ್ಲಾದರೂ ನಾಯಕತ್ವ ಸುಲಭವಾದುದಲ್ಲ; ಯೋಗ್ಯತೆ, ಸಾಧನೆ ಮತ್ತು ತಪಸ್ಸುಗಳ ಆಧಾರದದಲ್ಲಿ ನಾಯಕತ್ವದ ತೀರ್ಮಾನ ಆಗಬೇಕು ಅಂತ ಹೇಳಿದರು.
ಮಂಡ್ಯ: ನಾಡಿನ ಹಿರಿಯ ರಾಜಕಾರಣಿ, ಮುತ್ಸದ್ದಿ, ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ (SM Krishna) ಅವರಿಗೆ ಈಗ 91ರ ಇಳಿಪ್ರಾಯ. ಬಹಳ ನಿಧಾನವಾಗಿ ಅಳೆದು ತೂಗಿ ಯೋಚಿಸಿ ಮಾತಾಡುತ್ತಾರೆ. ಇವತ್ತು ಅವರು ಮಂಡ್ಯದಲ್ಲಿರು. ರಾಜ್ಯ ರಾಜಕಾರಣದ ಬಗ್ಗೆ ಮಾತಾಡಿದ ಅವರು ಯಾವುದೇ ಸಂದರ್ಭದಲ್ಲಾದರೂ ನಾಯಕತ್ವ ಸುಲಭವಾದುದಲ್ಲ; ಯೋಗ್ಯತೆ, ಸಾಧನೆ ಮತ್ತು ತಪಸ್ಸುಗಳ ಆಧಾರದದಲ್ಲಿ ನಾಯಕತ್ವದ ತೀರ್ಮಾನ ಆಗಬೇಕು ಅಂತ ಹೇಳಿದರು. ಪ್ರಸಕ್ತ ರಾಜ್ಯಕೀಯ ವಿದ್ಯಮಾನಗಳ (present political scenario) ಬಗ್ಗೆ ಮಾತಾಡಿದ ಕೃಷ್ಣ ಆವರು, ರಾಜಕೀಯ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ತಿರುವು ಪಡೆದುಕೊಳ್ಳುತ್ತದೆ ಅಂತ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಐದು ವರ್ಷಗಳ ತಾವೇ ಮುಖ್ಯಮಂತ್ರಿ ಅಂತ ಹೇಳಿರುವ ಬಗ್ಗೆ ಕೃಷ್ಣ ಅವರ ಗಮನ ಸೆಳೆದಾಗ, ಅವರು ಹಾಗೆ ಹೇಳುವಂಥ ಸಂದರ್ಭ ಸೃಷ್ಟಿಯಾಗಿದ್ದು ಅನಾರೋಗ್ಯಕರ ಬೆಳವಣಿಗೆ ಅಂತ ಹೇಳಿದರು. ಸಿದ್ದರಾಮಯ್ಯ ಆ ಮಾತು ಹೇಳುವ ಸ್ಥಿತಿ ಉದ್ಭವಿಸಬಾರದಿತ್ತು ಎಂದು ಹಿರಿಯ ನಾಯಕ ಅಭಿಪ್ರಾಯಪಟ್ಟರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ