ಗದಗ: ಸಿಎಂ ಸಿದ್ದರಾಮಯ್ಯ ಎದುರು ಕಣ್ಣೀರಿಟ್ಟ ಮಹಿಳೆ; ಮನವಿ ಮಾಡಿದ್ದೇನು?
ಕರ್ನಾಟಕ ರಾಜ್ಯ ನಾಮಕರಣಕ್ಕೆ 50ರ ಸಂಭ್ರಮ ಹಿನ್ನಲೆ ಇಂದು(ನ.3) ಗದಗ(Gadag) ದಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಸ್ಥಳೀಯರಿಂದ ಮನವಿ ಪತ್ರ ಸ್ವೀಕರಿಸಿದರು. ಈ ವೇಳೆ ಆಗಮಿಸಿದ ಮಹಿಳೆಯೊಬ್ಬರು ಬೆಳೆ ನಷ್ಟವಾಗಿದೆ. ಪರಿಹಾರ ದೊರಕಿಸಿ ಎಂದು ಸಿಎಂ ಬಳಿ ಅಳಲು ತೋಡಿಕೊಂಡರು.
ಗದಗ, ನ.03: ಕರ್ನಾಟಕ ರಾಜ್ಯ ನಾಮಕರಣಕ್ಕೆ 50ರ ಸಂಭ್ರಮ ಹಿನ್ನಲೆ ಇಂದು(ನ.3) ಗದಗ(Gadag) ದಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ(Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ತಂಗಡಗಿ ಭೈರತಿ ಸುರೇಶ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವರು ಉಪಸ್ಥಿತರಿದ್ದರು. ಇನ್ನು ಕಾರ್ಯಕ್ರಮದ ಬಳಿಕ ಸ್ಥಳೀಯರಿಂದ ಮನವಿ ಪತ್ರ ಸ್ವೀಕರಿಸಿದರು. ಈ ವೇಳೆ ಆಗಮಿಸಿದ ಮಹಿಳೆಯೊಬ್ಬರು ಬೆಳೆ ನಷ್ಟವಾಗಿದೆ. ಪರಿಹಾರ ದೊರಕಿಸಿ ಎಂದು ಸಿಎಂ ಬಳಿ ಅಳಲು ತೋಡಿಕೊಂಡರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos