ಭಟ್ರ ತಮಟೆ ಏಟಿಗೆ ಸಖತ್ ಸ್ಟೆಪ್ ಹಾಕಿದ ಆಟೋ ಡ್ರೈವರ್ಗಳು
Yogaraj Bhat: ಯೋಗರಾಜ್ ಭಟ್ಟರು ನಿರ್ದೇಶನ ಮಾಡಿರುವ 'ಗರಡಿ' ಸಿನಿಮಾವು ನವೆಂಬರ್ 10 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಟ್ಟರು ತೊಡಗಿದ್ದಾರೆ. ಭಟ್ಟರು ಭಾರಿಸಿರುವ ತಮಟೆ ಏಟಿಗೆ ಆಟೋ ಡ್ರೈವರ್ಗಳು ಕುಣಿದು ಕುಪ್ಪಳಿಸಿದ್ದಾರೆ.
ಯೋಗರಾಜ ಭಟ್ಟರು (Yogaraj Bhatt) ಮತ್ತೆ ತಮಟೆ ಕೈಗೆತ್ತಿಕೊಂಡಿದ್ದಾರೆ. ‘ಗರಡಿ‘ (Garadi) ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಪ್ರಚಾರ ಮಾಡಲು ಚಿತ್ರತಂಡದೊಟ್ಟಿಗೆ ಅಖಾಡಕ್ಕೆ ಇಳಿದಿದ್ದಾರೆ ಯೋಗರಾಜ್ ಭಟ್. ಆಟೋ ಡ್ರೈವರ್ ವೇಷ ಧರಿಸಿ ಬೆಂಗಳೂರಿನ ಬೀದಿಗಳಲ್ಲಿ ಆಟೋ ಓಡಿಸಿದ್ದಾರೆ. ಮಾತ್ರವಲ್ಲದೆ ತಮಟೆ ಬಡಿದಿದ್ದಾರೆ. ಯೋಗರಾಜ್ ಭಟ್ಟರ ತಮಟೆ ಏಟಿಗೆ ಆಟೋ ಡ್ರೈವರ್ಗಳು ಕುಣಿದು ಕುಪ್ಪಳಿಸಿದ್ದಾರೆ. ಅಂದಹಾಗೆ ‘ಗರಡಿ’ ಸಿಸಿನಿಮಾದ ಟ್ರೈಲರ್ ಅನ್ನು ಇತ್ತೀಚೆಗಷ್ಟೆ ನಟ ದರ್ಶನ್ ಬಿಡುಗಡೆ ಮಾಡಿದ್ದಾರೆ. ಸಿನಿಮಾ ನವೆಂಬರ್ 10ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 03, 2023 10:19 PM
Latest Videos