Hodirele Halagi: ‘ಹೊಡಿರೆಲೆ ಹಲಗಿ..’ ಎನ್ನುತ್ತ ಯೋಗರಾಜ್​ ಭಟ್ಟರ ‘ಗರಡಿ’ಯಲ್ಲಿ ಬಿಂದಾಸ್​ ಆಗಿ ಕುಣಿದ ನಿಶ್ವಿಕಾ ನಾಯ್ಡು

Garadi Movie Song: ‘ಗರಡಿ’ ಸಿನಿಮಾದ ‘ಹೊಡಿರೆಲೆ ಹಲಗಿ..’ ಹಾಡು ಡಿಫರೆಂಟ್​ ಆಗಿ ಮೂಡಿಬಂದಿದೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಯೋಗರಾಜ್​ ಭಟ್​ ಅವರು ಈ ಸಾಂಗ್​ ಬರೆದಿದ್ದಾರೆ.

Hodirele Halagi: ‘ಹೊಡಿರೆಲೆ ಹಲಗಿ..’ ಎನ್ನುತ್ತ ಯೋಗರಾಜ್​ ಭಟ್ಟರ ‘ಗರಡಿ’ಯಲ್ಲಿ ಬಿಂದಾಸ್​ ಆಗಿ ಕುಣಿದ ನಿಶ್ವಿಕಾ ನಾಯ್ಡು
ನಿಶ್ವಿಕಾ ನಾಯ್ಡು
Follow us
ಮದನ್​ ಕುಮಾರ್​
|

Updated on:Jun 14, 2023 | 5:17 PM

ನಟಿ ನಿಶ್ವಿಕಾ ನಾಯ್ಡು (Nishvika Naidu) ಅವರು ಸೂಪರ್​ ಡ್ಯಾನ್ಸರ್​ ಅನ್ನೋದರಲ್ಲಿ ಅನುಮಾನವೇ ಇಲ್ಲ. ಈಗ ಅವರು ‘ಗರಡಿ’ ಸಿನಿಮಾದ ವಿಶೇಷ ಹಾಡಿನಲ್ಲಿ ಬಿಂದಾಸ್​ ಆಗಿ ಕುಣಿದಿದ್ದಾರೆ. ಯೋಗರಾಜ್​ ಭಟ್​ (Yogaraj Bhat) ಬರೆದ ‘ಹೊಡಿರೆಲೆ ಹಲಗಿ..’ ಹಾಡು ಇಂದು (ಜೂನ್​ 14) ಬಿಡುಗಡೆ ಆಗಿದೆ. ಈ ಲಿರಿಕಲ್​ ವಿಡಿಯೋದಲ್ಲಿ ಒಂದಷ್ಟು ಡ್ಯಾನ್ಸ್​ ಸ್ಟೆಪ್​ಗಳ ಝಲಕ್​ ತೋರಿಸಲಾಗಿದೆ. ಜೊತೆಗೆ ಮೇಕಿಂಗ್​ ವಿಡಿಯೋ ಕೂಡ ಇದರಲ್ಲಿ ಇದೆ. ಎ. ಹರ್ಷ ಅವರ ನೃತ್ಯ ನಿರ್ದೇಶನದಲ್ಲಿ ನಿಶ್ವಿಕಾ ನಾಯ್ಡು ಅವರು ಸಖತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಅವರ ಕುಣಿತ ನೋಡಿ ಪಡ್ಡೆಗಳಿಗೆ ಕಿಕ್​ ಏರುವಂತಿದೆ. ವಿ. ಹರಿಕೃಷ್ಣ ಅವರ ಸಂಗೀತ ನಿರ್ದೇಶನದಲ್ಲಿ ‘ಹೊಡಿರೆಲೆ ಹಲಗಿ..’ ಸಾಂಗ್​ (Hodirele Halagi Song) ಮೂಡಿಬಂದಿದೆ. ಮೇಘನಾ ಹಳಿಯಾಳ್​ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ. ‘ಸರೆಗಮಾ ಕನ್ನಡ’ ಮೂಲಕ ಈ ಹಾಡು ಬಿಡುಗಡೆ ಆಗಿದೆ.

ಯೋಗರಾಜ್​ ಭಟ್​ ಅವರು ಏನೇ ಮಾಡಿದರೂ ಅದು ಡಿಫರೆಂಟ್​ ಆಗಿ ಇರುತ್ತದೆ. ಮತ್ತಾರೂ ಊಹಿಸಲಾಗದಂತಹ ಪದಪುಂಜಗಳ ಮೂಲಕ ಅವರು ಸಾಹಿತ್ಯ ರಚಿಸುತ್ತಾರೆ. ‘ಹೊಡಿರೆಲೆ ಹಲಗಿ..’ ಸಾಂಗ್​ ಕೂಡ ಅದೇ ಶೈಲಿಯಲ್ಲಿ ಮೂಡಿಬಂದಿದೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಯೋಗರಾಜ್​ ಭಟ್​ ಅವರು ಈ ಸಾಂಗ್​ ಬರೆದಿದ್ದಾರೆ. ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ ವಿಶೇಷವಾದ ಸೆಟ್​ಗಳಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ.

‘ಸೌಮ್ಯ ಫಿಲ್ಮ್ಸ್​’ ಮತ್ತು​ ‘ಕೌರವ ಪ್ರೊಡಕ್ಷನ್​ ಹೌಸ್​​’ ಮೂಲಕ ‘ಗರಡಿ’ ಸಿನಿಮಾ ಸಿದ್ಧವಾಗುತ್ತಿದೆ. ಬಿಸಿ ಪಾಟೀಲ್​ ಅವರ ಪತ್ನಿ ವನಜಾ ಪಾಟೀಲ್​ ಈ ಚಿತ್ರದ ನಿರ್ಮಾಪಕರು. ಸೂರ್ಯ, ಬಿಸಿ ಪಾಟೀಲ್​, ಸೋನಲ್ ಮಾಂಥೆರೋ, ಧರ್ಮಣ್ಣ ಕಡೂರು, ಪೃಥ್ವಿ ಶಾಮನೂರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಅವರನ್ನು ಡ್ಯಾನ್ಸಿಂಗ್​ ಡಾನ್​ ಎಂದು ಚಿತ್ರತಂಡದವರು ಹೊಗಳಿದ್ದಾರೆ. ‘ನಿಶ್ವಿಕಾ ಅವರು ಅದ್ಭುತ ನೃತ್ಯಗಾರ್ತಿ’ ಎಂದು ಯೋಗರಾಜ್​ ಭಟ್​ ಹೇಳಿದ್ದಾರೆ.

ಇದನ್ನೂ ಓದಿ: ನಟಿ ನಿಶ್ವಿಕಾ ನಾಯ್ಡು ಹೊಸ ಲುಕ್​ ಹೇಗಿದೆ ನೋಡಿ

‘ನಾನು 7ನೇ ತರಗತಿಯಲ್ಲಿ ಇದ್ದಾಗ ಒಂದು ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದೆ. ಆ ಶೋಗೆ ಗೆಸ್ಟ್​ ಆಗಿ ಬಿ.ಸಿ. ಪಾಟೀಲ್​ ಬಂದಿದ್ದರು. ಇದೇ ಥರ ಟ್ಯಾಲೆಂಟ್​ ಮುಂದುವರಿಸಿದ್ರೆ ನೀನು ಹೀರೋಯಿನ್​ ಆಗುತ್ತೀಯ ಅಂತ ಅವರು ಅಂದು ನನಗೆ ಹೇಳಿದ್ದರು. ಇಂದು ಅವರ ಸಂಸ್ಥೆಯ ಸಿನಿಮಾದಲ್ಲಿ ನಾನು ಒಂದು ಸಾಂಗ್​ಗೆ ಡ್ಯಾನ್ಸ್ ಮಾಡಿದ್ದು ಖುಷಿ ಆಯ್ತು. ನನಗೆ ಡ್ಯಾನ್ಸ್​ ಎಂದರೆ ತುಂಬ ಇಷ್ಟ. ನನಗೆ ಬೇಕಾದಂತಹ ಸೂಕ್ತ ಅವಕಾಶ ಇದಾಗಿತ್ತು. ಈ ಸಾಂಗ್​ ಯಾವಾಗ ರಿಲೀಸ್​ ಆಗತ್ತೋ ಅಂಥ ನಾನು ಕಾಯುತ್ತಿದ್ದೆ. ಯೋಗರಾಜ್​ ಭಟ್​ ಅವರ ಜೊತೆ ನಾನು ಮೂರು ಸಿನಿಮಾ ಮಾಡಿದ್ದೇನೆ’ ಎಂದು ಸಾಂಗ್​ ರಿಲೀಸ್​ ಕಾರ್ಯಕ್ರಮದ ವೇದಿಕೆಯಲ್ಲಿ ನಿಶ್ವಿಕಾ ನಾಯ್ಡು ಹೇಳಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:06 pm, Wed, 14 June 23