Karnataka Assembly Polls: ಶ್ರೀರಂಗಪಟ್ಟಣದ ಗೆಂಡೆ ಹೊಸಹಳ್ಳಿ ಬಳಿ ಚುನಾವಣಾಧಿಕಾರಿಗಳಿಂದ ಬಿವೈ ವಿಜಯೇಂದ್ರ ಕಾರು ತಪಾಸಣೆ

Karnataka Assembly Polls: ಶ್ರೀರಂಗಪಟ್ಟಣದ ಗೆಂಡೆ ಹೊಸಹಳ್ಳಿ ಬಳಿ ಚುನಾವಣಾಧಿಕಾರಿಗಳಿಂದ ಬಿವೈ ವಿಜಯೇಂದ್ರ ಕಾರು ತಪಾಸಣೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 22, 2023 | 6:53 PM

ತಮ್ಮ ಕಾರನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸುವಾಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ವಿಜಯೇಂದ್ರ ತನಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಪೋನಲ್ಲಿ ಮಾತಾಡುತ್ತಿರುತ್ತಾರೆ.

ಮಂಡ್ಯ: ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಪ್ರಯಾಣಿಸುತ್ತಿದ್ದ ಕಾರನ್ನು ಚುನಾವಣಾಧಿಕಾರಿಗಳು (poll officials) ಶ್ರೀರಂಗಪಟ್ಟಣ (Srirangapatna) ತಾಲ್ಲೂಕಿನ ಗೆಂಡೆ ಹೊಸಹಳ್ಳಿ ಬಳಿ ತಡೆದು ಪರಿಶೀಲನೆ ನಡೆಸಿದರು. ವಿಜಯೇಂದ್ರ.], ಪಾಂಡವಪುರದಲ್ಲಿ ಪಕ್ಷದ ಅಭ್ಯರ್ಥಿ ಡಾ ಇಂದ್ರೇಶ್ ಪರ ಪ್ರಚಾರ ನಡೆಸಿ ಮಳವಳ್ಳಿಗೆ ಹೋಗುವಾಗ ಅವರ ಕಾರಿನ ತಪಾಸಣೆ ನಡೆಸಲಾಯಿತು. ತಮ್ಮ ಕಾರನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸುವಾಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ವಿಜಯೇಂದ್ರ ತನಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಪೋನಲ್ಲಿ ಮಾತಾಡುತ್ತಿರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Apr 22, 2023 06:53 PM