ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಕನಿಷ್ಟ ರೂ. 5 ಸಾವಿರ ಉಳಿಯುತ್ತಿದೆ: ಸಿದ್ದರಾಮಯ್ಯ

|

Updated on: Nov 24, 2023 | 4:40 PM

ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿಗಳಿಗಾಗಿ ಪ್ರಸಕ್ತ ವರ್ಷ ತಮ್ಮ ಸರ್ಕಾರ ಸುಮಾರು 38,000 ಕೋಟಿ ರೂ. ಖರ್ಚು ಮಾಡಲಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಮುಂದಿನ ಆರ್ಥಿಕ ವರ್ಷ ಇವೇ ಗ್ಯಾರಂಟಿಗಳಿಗೆ ಸುಮಾರು 58,000 ಕೋಟಿ ರೂ. ಯನ್ನು ಸರ್ಕಾರ ಖರ್ಚು ಮಾಡಲಿದೆ ಎಂದು ಅವರು ಹೇಳಿದರು.

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ (Siddaramaiah government) 5 ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಗೆ (Shakti scheme) ಇಂದು ಶತಕೋಟಿ (billion) ಸಂಭ್ರಮ. ಅಂದರೆ ಶಕ್ತಿ ಯೋಜನೆಯ ಲಾಭವನ್ನು ಮಹಿಳೆಯರು ಒಂದು ಬಿಲಿಯನ್ ಸಲ ಮಾಡಿಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ನಗರದಲ್ಲಿ ಅಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರಕಾರದ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಂಡರು. ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಗ್ಯಾರಂಟಿಗಳಿಂದ ರಾಜ್ಯದ ಪ್ರತಿ ಬಡ ಕುಟುಂಬಕ್ಕೆ ಪ್ರತಿ ತಿಂಗಳು, ಕನಿಷ್ಟ 5-6 ಸಾವಿರ ರೂಪಾಯಿ ಉಳಿಯುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ದಾಸರ ಪದವನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಜನರಿಂದ ಸಂಗ್ರಹವಾಗುವ ತೆರಿಗೆ ಹಣವನ್ನು ಬಡಜನರಿಗಾಗಿ ಸರ್ಕಾರ ಖರ್ಚು ಮಾಡುತ್ತಿದೆ, ಶಕ್ತಿ ಯೋಜನೆ ಅಡಿ ಮಹಿಳೆಯರು ಯಾರೇ ಆಗಿರಲಿ-ಬಡವರು-ಶ್ರೀಮಂತರು ಉಚಿತವಾಗಿ ಪ್ರಯಾಣಿಸಬಹುದು, ತಮ್ಮ ಹೆಂಡತಿಯಂತೆ ಅಂಬಾನಿ ಹೆಂಡತಿಯೂ ರಾಜ್ಯ ಸರ್ಕಾರೀ ಸ್ವಾಮ್ಯದ ಬಸ್ಗಳಲ್ಲಿ ಪ್ರಯಾಣಿಸಬಹುದು ಅಂತ ಹೇಳಿದರು. ಅಂಬಾನಿ ಹೆಂಡತಿ? ಸರ್, ಅವರು ಪರರಾಜ್ಯದವರಲ್ಲವೇ? ನಮ್ಮ ನಾಯಕರೇ ಹಾಗೆ ಮಾರಾಯ್ರೇ, ಮಾತಿನ ಭರದಲ್ಲಿ ಕೆಲವು ಸಲ ಉತ್ಪ್ರೇಕ್ಷೆಯ ಮಾತಾಡಿಬಿಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on