ತುಮಕೂರು: ರಾಷ್ಟ್ರೀಯ ಹೆದ್ದಾರಿಗೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ- ಪೂರ್ಣ ಮಾಹಿತಿ ಇಲ್ಲಿದೆ

| Updated By: shivaprasad.hs

Updated on: Mar 31, 2022 | 11:18 AM

ಬಟವಾಡಿ ಎಪಿಎಂಸಿಯಿಂದ ಗುಬ್ಬಿ ಗೇಟ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮಿಗಳ ರಸ್ತೆ ಎಂದು ನಾಮಕರಣ ತುಮಕೂರು ಮಹಾನಗರ ಪಾಲಿಕೆ ನಾಮಕರಣ ಮಾಡಿದೆ.

ತುಮಕೂರು: ಬಟವಾಡಿ ಎಪಿಎಂಸಿಯಿಂದ ಗುಬ್ಬಿ ಗೇಟ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮಿಗಳ ರಸ್ತೆ ಎಂದು ನಾಮಕರಣ ತುಮಕೂರು ಮಹಾನಗರ ಪಾಲಿಕೆ ನಾಮಕರಣ ಮಾಡಿದೆ. ಬಟವಾಡಿ ವೃತ್ತದಲ್ಲಿ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ನಾಮಫಲಕ ಉದ್ಘಾಟಿಸಿದ್ದಾರೆ. ತುಮಕೂರು ಸಂಸದ ಜಿಎಸ್ ಬಸವರಾಜ್, ನಗರ ಶಾಸಕ ಜಿಬಿ ಜ್ಯೋತಿ ಗಣೇಶ್ ,ಕಮಿಷನರ್ ರೇಣುಕಾ, ಮೇಯರ್ ಕೃಷ್ಣಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತುಮಕೂರು ಸಂಸದ ಜಿಎಸ್ ಬಸವರಾಜ್ ಮಾತನಾಡಿ, ಪೂಜ್ಯ ಮಹಾಸ್ವಾಮಿಗಳ 115 ನೇ ವರ್ಷದ ಸವಿನೆನಪಿಗಾಗಿ ಬಟವಾಡಿಯಿಂದ ಗುಬ್ಬಿ ಗೇಟ್​ವರೆಗಿನ ರಾಷ್ಟ್ರೀಯ ಹೆದ್ದಾರಿಗೆ ಶಿವಕುಮಾರ ಸ್ವಾಮಿಗಳ ಹೆಸರು ನಾಮಕರಣ ಮಾಡಲಾಗಿದೆ. ಮಹಾನಗರ ಪಾಲಿಕೆ ಸಹಯೋಗದಲ್ಲಿ ಶ್ರೀಗಳ ಹೆಸರನ್ನು ಇವತ್ತು ನಾಮಕರಣ ಮಾಡಲಾಗಿದೆ. ನಗರಕ್ಕೆ ಬರುವ ಪ್ರತಿಯೊಬ್ಬರು ಶ್ರೀಗಳ ದರ್ಶನ ಮಾಡಲಿ ಎಂದು ಸ್ಯ್ಟಾಚು ನಿರ್ಮಾಣ ಮಾಡಲು ಪ್ಲಾನ್ ಮಾಡಿದ್ದಾರೆ. ಪಕ್ಷಾತೀತವಾಗಿ ಎಲ್ಲರು ಸೇರಿ ಒಗ್ಗಟಿನಿಂದ ಕೆಲಸ ಮಾಡಿದ್ದಾರೆ. ಇದು ಕೂಡ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಶಿವಕುಮಾರ ಶ್ರೀಗಳ 115ನೇ ಜಯಂತಿ ಹಿನ್ನೆಲೆ; ಸಿದ್ಧಗಂಗಾ ಮಠಕ್ಕೆ ಇಂದು ರಾಹುಲ್, ನಾಳೆ ಅಮಿತ್ ಷಾ ಭೇಟಿ

ತುಮಕೂರಿಗೆ ಅಮಿತ್ ಷಾ ಭೇಟಿ ಹಿನ್ನೆಲೆ; ನಗರದಲ್ಲಿ ಮಾರ್ಗ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆಯ ಮಾಹಿತಿ ಇಲ್ಲಿದೆ

Published on: Mar 31, 2022 11:16 AM