ತುಮಕೂರಿಗೆ ಅಮಿತ್ ಷಾ ಭೇಟಿ ಹಿನ್ನೆಲೆ; ನಗರದಲ್ಲಿ ಮಾರ್ಗ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆಯ ಮಾಹಿತಿ ಇಲ್ಲಿದೆ
ಸಿದ್ದಗಂಗಾ ಮಠಕ್ಕೆ ಅಮಿತ್ ಷಾ ಭೇಟಿ ಹಿನ್ನೆಲೆಯಲ್ಲಿ ತುಮಕೂರು ನಗರ ಹಾಗೂ ಸಿದ್ದಗಂಗಾ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಸಂಚಾರ ವ್ಯವಸ್ಥೆ ಹಾಗೂ ಪಾರ್ಕಿಂಗ್ನಲ್ಲಿ ಕೆಲವು ಬದಲಾವಣೆ ಕೈಗೊಳ್ಳಲಾಗಿದ್ದು, ಅದರ ಮಾಹಿತಿ ಇಲ್ಲಿದೆ.
ತುಮಕೂರು: ನಾಳೆ (ಶುಕ್ರವಾರ, ಏ.1) ಸಿದ್ದಗಂಗಾ ಮಠಕ್ಕೆ ಅಮಿತ್ ಷಾ (Amit Shah) ಭೇಟಿ ಹಿನ್ನೆಲೆಯಲ್ಲಿ ತುಮಕೂರು ನಗರ ಹಾಗೂ ಸಿದ್ದಗಂಗಾ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಗರ ಹಾಗೂ ಮಠದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ತುಮಕೂರು ವಿವಿ ಹೆಲಿಪ್ಯಾಡ್ನಿಂದ ಹಿಡಿದು ಸಿದ್ದಗಂಗಾ ಮಠದವರೆಗೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಮೂರು ದಿನಗಳಿಂದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮೊಕ್ಕಾಂ ಹೂಡಿದ್ದಾರೆ. ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಸೇರಿದಂತೆ ಎಎಸ್ಪಿ, ಡಿಎಸ್ಪಿಗಳು ಭಾಗಿಯಾಗಿದ್ದಾರೆ. ಸಂಚಾರ ವ್ಯವಸ್ಥೆ ಹಾಗೂ ಪಾರ್ಕಿಂಗ್ನಲ್ಲಿ ಕೆಲವು ಬದಲಾವಣೆ ಕೈಗೊಳ್ಳಲಾಗಿದ್ದು, ಅದರ ಮಾಹಿತಿ ಇಲ್ಲಿದೆ.
ಸಂಚಾರ ಮಾರ್ಗದಲ್ಲಿ ಬದಲಾವಣೆ; ಹೇಗಿರಲಿದೆ ಹೊಸ ಮಾರ್ಗ?
ತುಮಕೂರು: ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಿದ್ದಗಂಗಾ ಮಠಕ್ಕೆ ಭೇಟಿ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ಮಾರ್ಗ ಬದಲಾವಣೆ ಹಾಗೂ ಮಠಕ್ಕೆ ಭೇಟಿ ನೀಡುವ ವಾಹನಗಳ ಕುರಿತು ಮಾಹಿತಿ ಬಿಡುಗಡೆ ಮಾಡಲಾಗಿದೆ. ಈ ಕುರಿತ ವಿವರ ಇಲ್ಲಿದೆ.
*ಎಪಿಎಮ್ ಸಿ ಸರ್ವಿಸ್ ರಸ್ತೆ ಸಂಪೂರ್ಣ ಬಂದ್: ಅರ್ಬನ್ ರೆಸಾರ್ಟ್, ಶ್ರೀ ನಗರ, ಬಂಡೆಪಾಳ್ಯ ಸಿದ್ದಗಂಗಾ ಮಠಕ್ಕೆ ಸಾರ್ವಜನಿಕ ವಾಹನಗಳಿಗೆ ಸಂಚಾರ ನಿರ್ಬಂಧ.
*ಸಿದ್ದಗಂಗಾ ಮಠಕ್ಕೆ ಬೆಂಗಳೂರು ಕಡೆಯಿಂದ ಬರುವ ವಾಹನಗಳು: ತುಮಕೂರಿನ ಕ್ಯಾತ್ಸಂದ್ರ ವೃತ್ತದಿಂದ ಬಟವಾಡಿ. ಬಟವಾಡಿ ಬ್ರಿಡ್ಜ್ ಕೆಳಭಾಗದಿಂದ ದೇವರಾಯಪಟ್ಟಣ ಕ್ರಾಸ್ ಮೂಲಕ ಸಿದ್ದಗಂಗಾ ಮಠದ ರಾಗಿ ಹೊಲದ ಒಳಭಾಗದಲ್ಲಿ ವಾಹನಗಳ ನಿಲುಗಡೆ.
*ಕುಣಿಗಲ್ ಕಡೆಯಿಂದ ಸಿದ್ದಗಂಗಾ ಮಠಕ್ಕೆ ಮಾರ್ಗ: ಕುಣಿಗಲ್ ಜಂಕ್ಷನ್ -ರಿಂಗ್ ರಸ್ತೆ ಮೂಲಕ ರೋಟಿಗಾರ್ ಬಳಿ 80 ಅಡಿ ರಸ್ತೆ ಮೂಲಕ ಬಟವಾಡಿ ಜಂಕ್ಷನ್. ಬಟವಾಡಿ ಬ್ರೀಡ್ಜ್ ಕೆಳಭಾಗದಿಂದ ದೇವರಾಯಪಟ್ಟಣ ಕ್ರಾಸ್ ಮೂಲಕ ಸಿದ್ದಗಂಗಾ ಮಠದ ರಾಗಿ ಹೊಲ ಒಳಭಾಗದಲ್ಲಿ ವಾಹನ ನಿಲುಗಡೆ.
*ಶಿರಾ-ಮಧುಗಿರಿ ಕಡೆಯಿಂದ ಸಿದ್ದಗಂಗಾ ಮಠಕ್ಕೆ ಮಾರ್ಗ: ಅಂತರಸನಹಳ್ಳಿ ರಾಷ್ಟ್ರೀಯ ಹೆದ್ದಾರಿ 48ರ ರಸ್ತೆ ಮೂಲಕ ಭಾರತಿ ನಗರ ಬ್ರಿಡ್ಜ್ ಬಳಿ ಸರ್ವಿಸ್ ರಸ್ತೆಯಿಂದ ದೇವರಾಯಪಟ್ಟಣ ವೃತ್ತದ ಮೂಲಕ ಸಿದ್ದಗಂಗಾ ಮಠದ ರಾಗಿ ಹೊಲ ಪಾರ್ಕಿಂಗ್.
*ಗುಬ್ಬಿ ಚೇಳೂರು ಕಡೆಯಿಂದ ಬರುವವರಿಗೆ ಮಾರ್ಗ: ಗುಬ್ಬಿ ಜಂಕ್ಷನ್-ಲಕ್ಕಪ್ಪ ವೃತ್ತ, ಬಿಜಿಎಸ್ ವೃತ್ತ,ಅಶೋಕ ರಸ್ತೆ-ಕೋಡಿ ವೃತ್ತ, ಅಮಾನಿಕೆರೆ ಕೋತಿ ತೋಪು ರಸ್ತೆ ಮೂಲಕ ಹನುಮಂತ ಪುರ ಬ್ರಿಡ್ಜ್. ಬಳಿಕ ಭಾರತಿ ನಗರ ಬ್ರಿಡ್ಜ್ ಬಳಿಯ ಸರ್ವಿಸ್ ರಸ್ತೆಯಿಂದ ದೇವರಾಯಪಟ್ಟಣ ಸರ್ಕಲ್ ಮೂಲಕ ಸಿದ್ದಗಂಗಾ ಮಠದ ರಾಗಿ ಹೊಲ- ಪಾರ್ಕಿಂಗ್.
*ಬೆಂಗಳೂರು ಕಡೆಯಿಂದ ಸಿದ್ದಗಂಗಾ ಮಠಕ್ಕೆ ಮಾರ್ಗ: ಕ್ಯಾತ್ಸಂದ್ರ ಬಟವಾಡಿ, ಬಟವಾಡಿ ಬ್ರಿಡ್ಜ್ ಕೆಳಭಾಗದಿಂದ ದೇವರಾಯಪಟ್ಟಣ ಕ್ರಾಸ್ ಮೂಲಕ ಮಠದ ರಾಗಿ ಹೊಲ.
*ತುಮಕೂರು ನಗರದ ಪ್ರಮುಖ ರಸ್ತೆಗಳಾದ ಬಿಹೆಚ್ ರಸ್ತೆ, ರಾಷ್ಟ್ರೀಯ ಹೆದ್ದಾರಿ 48, ರಿಂಗ್ ರಸ್ತೆ, ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಯಾವುದೇ ಸಾರ್ವಜನಿಕ ವಾಹನಗಳನ್ನು ಸಮಾರಂಭದ ದಿನ ರಸ್ತೆಯಲ್ಲಿ ನಿಲುಗಡೆ ಮಾಡದಂತೆ ನಿರ್ಭಂದ.
*ತುಮಕೂರು ಜಿಲ್ಲೆ ಹಾಗೂ ಹೊರಜಿಲ್ಲೆಯಿಂದ ಸಿದ್ದಗಂಗಾ ಮಠಕ್ಕೆ ಬರುವ ಮಾರ್ಗ: ಎಲ್ಲಾ ದರ್ಜೆಯ ವಾಹನಗಳನ್ನು ದೇವರಾಯಪಟ್ಟಣ ಸರ್ಕಲ್ ಮೂಲಕ ಸಿದ್ದಗಂಗಾ ಮಠದ ಬ್ಯಾಕ್ ಗೇಟ್ ಮೂಲಕ ರಾಗಿ ಹೊಲ ಪಾರ್ಕಿಂಗ್.
*ತುಮಕೂರು ನಗರದೊಳಗೆ ವಾಹನ/ಬಸ್ಗಳನ್ನು ನಿಲುಗಡೆ ಮಾಡಲು ಜೂನಿಯರ್ ಕಾಲೇಜ್ ಮೈದಾನ, ಅಮಾನಿಕೆರೆ ಎದುರು ನಿಲುಗಡೆಗೆ ವ್ಯವಸ್ಥೆ.
ಸಮಾರಂಭ ಮುಗಿದ ಬಳಿಕ ಹೊರಡುವ ಮಾರ್ಗ:
*ಸಿದ್ದಗಂಗಾ ಮಠದ ಕಾರ್ಯಕ್ರಮ ಮುಗಿದ ಬಳಿಕ ನಗರದೊಳಗೆ ಹೋಗುವ ಎಲ್ಲಾ ವಾಹನಗಳು ಸಿದ್ದಗಂಗಾ ಮಠದ ರಾಗಿಹೊಲದಿಂದ ಮಾರನಾಯಕನಪಾಳ್ಯ, ಸಿದ್ದಗಂಗಾ ಮಠದ ಕ್ರಾಸ್ ಮೂಲಕ ತುಮಕೂರು, ಬೆಂಗಳೂರು ಕಡೆ ಪ್ರಯಾಣ ಬೆಳೆಸಬಹುದು.
ಇದನ್ನೂ ಓದಿ:
ಶಿವಕುಮಾರ ಶ್ರೀಗಳ 115ನೇ ಜಯಂತಿ ಹಿನ್ನೆಲೆ; ಸಿದ್ಧಗಂಗಾ ಮಠಕ್ಕೆ ಇಂದು ರಾಹುಲ್, ನಾಳೆ ಅಮಿತ್ ಷಾ ಭೇಟಿ
Published On - 8:22 am, Thu, 31 March 22