ಶ್ರೀಕೃಷ್ಣ ಭವನ ನಿರ್ಮಾಣಕ್ಕೆ ಡಾ ಸುಧಾಕರ್​ರಿಂದ ₹ 50 ಲಕ್ಷ ಕಲೆಕ್ಟ್ ಮಾಡುವಂತೆ ಡಿಸಿಗೆ ಮನವಿ ಮಾಡಿದ ಪ್ರದೀಪ್ ಈಶ್ವರ್!

ಅರುಣ್​ ಕುಮಾರ್​ ಬೆಳ್ಳಿ

Updated on: Aug 26, 2024 | 6:07 PM

ಒಟ್ಟಿನಲ್ಲಿ ಈಶ್ವರ್​ಗೆ ಸಂಸದ ಸುಧಾಕರ್ ವಿರುದ್ಧ ಕ್ಯಾತೆ ತೆಗೆಯುವುದು ಬೇಕಿತ್ತು ಅನಿಸುತ್ತೆ. ನಂತರ ಅವರು, ತಾನು ರಾಜಕೀಯಕ್ಕೆ ಹೊಸಬನಿರಬಹುದು, ಆದರೆ ಕೆಲಸ ತನ್ನಿಂದಾಗುವ ಹಾಗಿದ್ದರೆ ಮಾಡುತ್ತೇನೆ ಅನ್ನುತ್ತೇನೆ, ಆಗಲಾರದು ಅಂತೆನಿಸಿದರೆ ಸುಮ್ಮನಿದ್ದು ಬಿಡುತ್ತೇನೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ: ಆಗಲೇ ಹೇಳಿದ ಹಾಗೆ ಚಿಕ್ಕಬಳ್ಳಾಪುರದ ಶಾಸಕ ಮತ್ತು ಸಂಸದನ ನಡುವಿನ ರಾಜಕೀಯ ಸಮರ ಮುಗಿಯಲಾರದು. ಇವತ್ತು ನಗರದಲ್ಲಿ ಆಯೋಜಿಲಾಗಿದ್ದ ಕೃಷ್ಣ ಜನ್ಮಾಷ್ಟಮಿ ಅಚರಣೆ ಕಾರ್ಯಕ್ರಮದಲ್ಲಿ ಡಾ ಕೆ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ಭಾಗಿಯಾಗಿದ್ದರು. ಮೊದಲು ಮಾತಾಡಿದ ಸಂಸದ, ನಗರದಲ್ಲಿ ಶ್ರೀಕೃಷ್ಣ ಭವನ ನಿರ್ಮಾಣಕ್ಕೆ ₹ 50ಲಕ್ಷ ನೀಡುವ ಆಶ್ವಾಸನೆ ನೀಡಿರಬಹುದು. ಅವರ ಭಾಷಣದ ಕ್ಲಿಪ್ ನಮಗೆ ಸಿಕ್ಕಿಲ್ಲ. ಶಾಸಕ ಪ್ರದೀಪ್ ಈಶ್ವರ್ ಮಾತಾಡುವಾಗ, ಕ್ಷೇತ್ರದ ಅಭಿವೃದ್ಧಿಗೆ ₹ 800 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದ ಸಚಿವ ಡಾ ಎಂಸಿ ಸುಧಾಕರ್ ಅವರಿಗೆ ಅಭಿನಂದನೆ ಸಲ್ಲಿಸುತ್ತಾ ಕೃಷ್ಣ ಜನ್ಮಾಷ್ಟಮಿಯ ಅಧಿಕೃತ ಆಚರಣೆ ಶುರುವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಎಂದು ಹೇಳುತ್ತಾರೆ.

ನಗರದಲ್ಲಿ ಶ್ರೀ ಕೃಷ್ಣ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ, ಅನುದಾನ ತಂದು ಅದನ್ನು ನಿರ್ಮಿಸುವ ಜವಾಬ್ದಾರಿ ತನ್ನದು ಎಂದು ಹೇಳಿ ಜಿಲ್ಲಾಧಿಕಾರಿಯವರನ್ನು ಉದ್ದೇಶಿಸಿ, ಭವನ ನಿರ್ಮಣಕ್ಕೆ ಯಾರೆಲ್ಲ ದೇಣಿಗೆ ನೀಡುತ್ತೇವೆ ಅಂತ ಮಾತಾಡಿದ್ದಾರೋ ಅವರ ಬಳಿ ಮೊದಲು ಹಣ ಕಲೆಕ್ಟ್ ಮಾಡಿ ಅನ್ನುತ್ತಾರೆ! ಯಾಕೆಂದರೆ ಕೆಲವರು ವೇದಿಕೆ ಮೇಲೆ ಉದ್ವೇಗದಲ್ಲಿ ಮಾತಾಡಿ ನಂತರ ಮರೆತು ಹೋಗುತ್ತಾರೆ ಎಂದು ಈಶ್ವರ್ ತಿವಿದರು.

ಸಂಸದ ಸುಧಾಕರ್ ಹೆಸರು ಉಲ್ಲೇಖಿಸದೆ ಅವರು ಈ ಮಾತು ಹೇಳಿದಾಗ ನೆರೆದಿದ್ದ ಜನರೆಲ್ಲ ಕೇಕೆ ಹಾಕುತ್ತಾ ಅದನ್ನು ಸ್ವಾಗತಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಾಸಕ ಸ್ಥಾನಕ್ಕೆ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಿದ್ರಾ? ರಾಜೀನಾಮೆ ಪತ್ರ ವೈರಲ್! 

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.