ಪ್ರಕಾಶ್ ರಾಜ್ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ, ಅವರೊಬ್ಬ ವಿಘ್ನಸಂತೋಷಿ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

|

Updated on: Apr 09, 2024 | 2:20 PM

ಅವರು ಮಾಡುವ ಆರೋಪಗಳಲ್ಲಿ ಕಿಂಚಿತ್ತಾದರೂ ಸತ್ಯಾಂಶವಿದ್ದರೆ ಇವತ್ತು ಬಿಜೆಪಿ 18 ರಾಜ್ಯಗಳಲ್ಲಿ ಸರ್ಕಾರ ನಡೆಸುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು. ಸಂಸದರ ಆದರ್ಶ ಗ್ರಾಮದ ಬಗ್ಗೆ ಪರಿಕಲ್ಪನೆಯೇ ಇಲ್ಲದವರು ಅದರ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೇಳಿದರು.

ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ್ ಜೋಶಿ (Pralhad Joshi) ಕೇಂದ್ರ ಸರ್ಕಾರ ವಿರುದ್ಧ ಭ್ರಷ್ಟಾಚಾರದ ಅರೋಪಗಳನ್ನು ಮಾಡುತ್ತಿರುವ ಸಿನಿಮಾ ನಟ ಪ್ರಕಾಶ್ (Prakash Raj) ಅವರ ಮಾತುಗಳಿಗೆ ಬೆಲೆಕೊಡುವ ಅವಶ್ಯಕತೆ ಇಲ್ಲ ಎಂದರು. ರೂ 2.86 ಲಕ್ಷ ಕೋಟಿ ಮೊತ್ತದ ಕಲ್ಲಿದ್ದಲು ಮತ್ತು 2ಜಿ ಹಗರಣಗಳನ್ನು ಸರ್ವೋಚ್ಛ ನ್ಯಾಯಾಲಯ ಮತ್ತು ಸಿಎಜಿ ವರದಿ (CAG report) ಬಯಲು ಮಾಡಿದ್ದವು, ಇದುವರೆಗೆ ಸಿಎಜಿ ಕೇಂದ್ರ ಸರ್ಕಾರದ ವಿರುದ್ಧ ಯಾವುದಾದರೂ ವರದಿ ನೀಡಿದೆಯಾ ಎಂದು ಕೇಳಿದರು. ಪ್ರಕಾಶ್ ಒಬ್ಬ ಅಸಂತಷ್ಟ ಜೀವಿ ಅಥವಾ ವಿಘ್ನ ಸಂತೋಷಿ, ರಾಜಕಾರಣದಲ್ಲಿ ಅವರ ಸ್ಥಾನಮಾನ ಏನು? ಅವರಾಗಲಿ ಕಮಲ್ ಹಾಸನ್ ಅವರಿಗಾಗಲೀ ಒಂದೇ ಒಂದು ಸೀಟು ಗೆಲ್ಲಲಾಗಲ್ಲ ಎಂದು ಜೋಶಿ ಹೇಳಿದರು. ಅವರು ಮಾಡುವ ಆರೋಪಗಳಲ್ಲಿ ಕಿಂಚಿತ್ತಾದರೂ ಸತ್ಯಾಂಶವಿದ್ದರೆ ಇವತ್ತು ಬಿಜೆಪಿ 18 ರಾಜ್ಯಗಳಲ್ಲಿ ಸರ್ಕಾರ ನಡೆಸುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು. ಸಂಸದರ ಆದರ್ಶ ಗ್ರಾಮದ ಬಗ್ಗೆ ಪರಿಕಲ್ಪನೆಯೇ ಇಲ್ಲದವರು ಅದರ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಾಂಗ್ರೆಸ್ ಶಾಸಕರಿಗೇ ಅವರ ಸರ್ಕಾರದ ಬಗ್ಗೆ ರೋಸಿ ಹೋಗಿದೆ: ಪ್ರಲ್ಹಾದ್ ಜೋಶಿ ವಾಗ್ದಾಳಿ

Follow us on