‘ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ’; ಪ್ರಕಾಶ್ ರಾಜ್

Updated on: Jun 17, 2026 | 1:34 PM

ಧರ್ಮಸ್ಥಳ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯ ಅವರು ಪ್ರಕಾಶ್ ರಾಜ್ ಹೆಸರನ್ನು ಹೇಳಿದ್ದರು. ಈ ವಿಷಯವಾಗಿ ಅವರು ಮಾತನಾಡಿದ್ದಾರೆ. ಈ ವೇಳೆ ದೇವರ ಮೇಲಿನ ನಂಬಿಕ ವಿಷಯ ಪ್ರಸ್ತಾಪ ಆಗಿದೆ. ‘ಹೋಮಕ್ಕೆ ಕೆಲವರು ಕೋಟಿ ಖರ್ಚು ಮಾಡ್ತಾರೆ, ನಾನು ರಂಗಭೂಮಿಗಾಗಿ ವ್ಯಯಿಸುತ್ತೇನೆ’ ಎಂದಿದ್ದಾರೆ.

ಪ್ರಕಾಶ್ ರಾಜ್ ನಾಸ್ತಿಕರು. ಅವರು ದೇವರನ್ನು ನಂಬೋದಿಲ್ಲ. ಆದಾಗ್ಯೂ ಕೆಲವೊಮ್ಮೆ ಅವರು ದೇವಸ್ಥಾನಕ್ಕೆ ತೆರಳಿದ್ದು ಇದೆ. ಇದಕ್ಕೆ ಕಾರಣ ಪತ್ನಿ ಎಂದು ಅವರು ಹೇಳಿದ್ದಾರೆ. ‘ನನ್ನ ಪತ್ನಿಗೆ ದೇವರ ಮೇಲೆ ನಂಬಿಕೆ ಇದೆ. ಅವಳು ಹೋಮ-ಹವನ ಮಾಡಿಸೋಣ ಎಂದಾಗ ನಾನು ಹೋಗುತ್ತೇನೆ. ಅದು ಅವಳ ನಂಬಿಕೆ. ಅದಕ್ಕೆ ಪ್ರತಿಯಾಗಿ ನಾನು ಜಗಳ ಮಾಡೋದಿಲ್ಲ. ನನ್ನ ಅನೇಕ ಗೆಳೆಯರು ಕೋಟಿ ಕೋಟಿ ಖರ್ಚು ಮಾಡಿ ಹೋಮ ಮಾಡಿಸುತ್ತಾರೆ. ಇದರಿಂದ ಅವರಿಗೆ ನೆಮ್ಮದಿ ಸಿಗುತ್ತದೆ. ಅದೇ ಕೋಟಿ ಹಣವನ್ನು ನಾನು ರಂಗಭೂಮಿಗೆ, ಫೀಸ್ ಕಟ್ಟಲು ಕಷ್ಟಪಡುವವರಿಗೆ ನೀಡುತ್ತೇನೆ. ಇದು ನನ್ನ ಮನಸ್ಸಿಗೆ ನೆಮ್ಮದಿ ಕೊಡುತ್ತದೆ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jun 17, 2026 01:33 PM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More