ಧಾರವಾಡ ಲೋಕಸಭಾ ಕ್ಷೇತ್ರ: ನಾಮಪತ್ರ ಸಲ್ಲಿಸಲಿರುವ ಪ್ರಲ್ಹಾದ್ ಜೋಶಿ, ದಾಖಲೆಯ ಜನ ಸೇರುವ ನಿರೀಕ್ಷೆ

|

Updated on: Apr 15, 2024 | 11:33 AM

ಪ್ರಲ್ಹಾರ್ ಜೋಶಿಯವರಿಗೆ ಟಿಕೆಟ್ ನೀಡುವ ಕುರಿತು ಸ್ಥಳಿಯ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೆ, ಕೊನೆ ರಾಜ್ಯ ಬಿಜೆಪಿ ನಾಯಕರು ಜೋಶಿಯವರ ಪರ ಬ್ಯಾಟ್ ಮಾಡಿದ ಕಾರಣ ಅವರಿಗೆ ಟಿಕೆಟ್ ಸಿಕ್ಕಿತು. ತಾನು ಈ ಮೊದಲು ನಾಮಪತ್ರ ಪತ್ರಸಲ್ಲಿಸುವಾಗ ನೆರೆಯುತ್ತಿದ್ದ ಜನಕ್ಕಿಂತ ಬಹುಪಾಲು ಹೆಚ್ಚು ಜನ ಜಿಲ್ಲಾಧಿಕಾರಿ ಕಚೇರಿಗೆ ಬರಲಿದ್ದಾರೆ ಎಂದು ಜೋಶಿ ಹೇಳಿದರು.

ಧಾರವಾಡ: ಹಾಲಿ ಸಂಸದ ಮತ್ತು ಧಾರವಾಡ ಲೋಕಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ (Pralhad Joshi) ಇಂದು ನಾಮಪತ್ರ ಸಲ್ಲಿಸಲಿದ್ದು ತಮ್ಮ ಜೊತೆ ಸಾವಿರಾರು ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ಬರಲಿದ್ದಾರೆ ಎಂದು ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ತಮ್ಮ ಅತ್ಯುನ್ನತ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಜನರ ಶುಭಾರ್ಶೀವಾದಗಳೊಂದಿಗೆ ತಾನಿಂದು ನಾಮಪತ್ರ ಸಲ್ಲಿಸುತ್ತಿರುವುವೆನೆಂದು ಹೇಳಿ, ತನ್ನೊಂದಿಗೆ ಕಾರ್ಯಕರ್ತರಲ್ಲದೆ, ಹಿರಿಯ ನಾಯಕರಾದ ಬಿಎಸ್ ಯಡಿಯೂರಪ್ಪ (BS Yediyurappa), ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಮತ್ತು ಉದ್ಯಮಿ ವಿಜಯ ಸಂಕೇಶ್ವರ್ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು. ಹಾಗೆ ನೋಡಿದರೆ, ಪ್ರಲ್ಹಾರ್ ಜೋಶಿಯವರಿಗೆ ಟಿಕೆಟ್ ನೀಡುವ ಕುರಿತು ಸ್ಥಳಿಯ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೆ, ಕೊನೆ ರಾಜ್ಯ ಬಿಜೆಪಿ ನಾಯಕರು ಜೋಶಿಯವರ ಪರ ಬ್ಯಾಟ್ ಮಾಡಿದ ಕಾರಣ ಅವರಿಗೆ ಟಿಕೆಟ್ ಸಿಕ್ಕಿತು. ತಾನು ಈ ಮೊದಲು ನಾಮಪತ್ರ ಪತ್ರಸಲ್ಲಿಸುವಾಗ ನೆರೆಯುತ್ತಿದ್ದ ಜನಕ್ಕಿಂತ ಬಹುಪಾಲು ಹೆಚ್ಚು ಜನ ಜಿಲ್ಲಾಧಿಕಾರಿ ಕಚೇರಿಗೆ ಬರಲಿದ್ದಾರೆ ಎಂದು ಜೋಶಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದಿಂಗಾಲೇಶ್ವರ ಸ್ವಾಮೀಜಿ ಮೂಲಕ ಪ್ರಲ್ಹಾದ್ ಜೋಶಿ ವಿರುದ್ಧ ಯಾರು ಹೇಳಿಕೆ ನೀಡಿಸುತ್ತಿದ್ದಾರೆ ಅಂತ ಗೊತ್ತಿದೆ: ಬಸನಗೌಡ ಯತ್ನಾಳ್