ಎಲ್ಲ ಹಿಂದೂಗಳು ತಮ್ಮ ತಮ್ಮ ಮನೆಗಳಲ್ಲಿ ತಲ್ವಾರ್​ಗಳನ್ನಿಡಬೇಕು-ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 13, 2023 | 12:40 PM

ಮನೆಯಲ್ಲಿ ಕೊಡಲಿ, ತಲ್ವಾರ್​ನಂಥ ಆಯುಧಗಳನ್ನು ಇಡೋದು ಅಪರಾಧವಲ್ಲ, ಪೊಲೀಸರು ಅದನ್ನು ಪ್ರಶ್ನಿಸಲಾಗದು, ಎಂದು ಮುತಾಲಿಕ್ ಹೇಳಿದರು

ಕಲಬುರಗಿ:  ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಅವರು ವಿವಾದಾತ್ಮಕ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಗುರುವಾರ ಕಲಬುರಗಿಯಲ್ಲಿ (Kalaburagi) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡಿದ ಅವರು ಬೇರೆ ನಮ್ಮ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಬಾರದು ಅಂದರೆ ಎಲ್ಲ ಹಿಂದೂಗಳು ತಮ್ಮ ಮನೆಗಳಲ್ಲಿ ತಲ್ವಾರ್ (sword), ಖಡ್ಗ, ಚಾಕು, ಚೂರಿ, ಮತ್ತು ಕೊಡಲಿ ಮೊದಲಾದ ಅಯುಧಗಳನ್ನಿಡಬೇಕು ಮತ್ತು ಅವುಗಳನ್ನು ಜನರಿಗೆ ಕಣ್ಣಿಗೆ ಕಾಣುವಂಥ ಸ್ಥಳಗಳಲ್ಲಿ ಇಡಬೇಕು ಎಂದು ಹೇಳಿದರು. ಆಯುಧ ಪೂಜೆಯಂದು ಟ್ರ್ಯಾಕ್ಟರ್, ಸ್ಕೂಟರ್ ಮೊದಲಾದವುಗಳಿಗೆ ಪೂಜೆ ಮಾಡುವ ಬದಲು ತಲ್ವಾರ್, ಕೊಡಲಿಗಳಿಗೆ ಪೂಜೆ ಮಾಡಬೇಕು ಅಂತ ಹೇಳಿದ ಮುತಾಲಿಕ್ ಮನೆಯಲ್ಲಿ ಅಂಥ ಆಯುಧಗಳನ್ನು ಇಡೋದು ಅಪರಾಧವಲ್ಲ, ಪೊಲೀಸರು ಅದನ್ನು ಪ್ರಶ್ನಿಸಲಾಗದು, ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ