ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆನ್ನುವುದು ಒಂದು ಯಕ್ಷಪ್ರಶ್ನೆಯಾಗಿಬಿಟ್ಟಿದೆ. ಮೈಸೂರಲ್ಲಿ ಇಂದು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯನವರು (Yathindra Siddaramaiah) ಮಳವಳ್ಳಿ (Malavalli) ತಾಲ್ಲೂಕಿನಲ್ಲಿರುವ ದೇವಸ್ಥಾನವೊಂದರ ಸಂಸ್ಥಾಪಕನ ಮೈಮೇಲೆ ದೇವರು ಬಂದು ತಮ್ಮ ತಂದೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಬೇಕೆಂದು ಹೇಳಿದ್ದನ್ನು ಉಲ್ಲೇಖಿಸಿದರು. ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಅನ್ನೋದು ಇನ್ನೂ ಅಂತಿಮಗೊಂಡಿಲ್ಲ, ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಾರೆ ಎಂದು ಹೇಳಿದರು. ಕೋಲಾರದಿಂದ ಸ್ಪರ್ಧಿಸಬೇಕೆನ್ನುವುದು ಅವರ ಇಂಗಿತವಾಗಿದೆ, ಆದರೆ ಇದು ಅವರ ಕೊನೆಯ ಚುನಾವಣೆಯಾಗಿರುವುದರಿಂದ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿ, ಗೆದ್ದು ಜನಸೇವೆ ಮಾಡಿ ಆಮೇಲೆ ರಿಟೈರಾಗಲಿ ಅಂತ ತಮ್ಮ ಆಸೆಯಾಗಿದೆ ಎಂದು ಯತೀಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ