ಪತ್ರಿಕಾ ಗೋಷ್ಟಿ ನಡುವೆ ದೆಹಲಿಯಿಂದ ಫೋನ್ ಕರೆ ಬಂದ ಬಳಿಕ ಪ್ರತಾಪ್ ಸಿಂಹ ಮಾತಿನ ಧಾಟಿ ಬದಲಾಯಿತು!

|

Updated on: Mar 13, 2024 | 3:11 PM

ಮೂರನೇ ಅವಧಿಯಲ್ಲಿ ಯುವಕರನ್ನು ಬೆಳೆಸಿ ರಾಜಕೀಯಕ್ಕೆ ವಿದಾಯ ಹೇಳಬೇಕೆಂದುಕೊಂಡಿದ್ದೆ, ಕೊನೆಯವರೆಗೂ ರಾಜಕಾರಣಿಯಾಗಿ ಉಳಿಯುವುದು ತನಗೆ ಇಷ್ಟವಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು. ದೇಶಕ್ಕೆ ಮೋದಿ ಜೀ ಅವರು ಬೇಕು, ಹಾಗಾಗಿ ಮೈಸೂರು ಮಹಾರಾಜರಿಗೆ ಟಿಕೆಟ್ ಕೊಟ್ಟರೆ ಎಲ್ಲ ಕಾರ್ಯಕರ್ತರು ಒಟ್ಟಾಗಿ ಅವರ ಗೆಲುವಿಗೆ ಶ್ರಮಿಸಬೇಕು, ತಾನಂತೂ ನಿರಾಶನಾಗಲ್ಲ, ಮೊದಲಿನಂತೆಯೇ ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ಸಂಸದ ಹೇಳಿದರು.

ಮೈಸೂರು: ತನಗೆ ಈ ಬಾರಿ ಟಿಕೆಟ್ ಸಿಗಲ್ಲ ಅನ್ನೋದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ (Pratap Simha) ಪತ್ರಿಕಾ ಗೋಷ್ಟಿ ನಡೆಸುತ್ತಿದ್ದಾಗ ದೆಹಲಿಯಿಂದ ಬಂದ ಕರೆಯಿಂದ ಖಚಿತವಾದಂತಿದೆ. ಕಾಲ್ ಬರುವ ಮುಂಚೆ ಮಾತಿನಲ್ಲಿದ್ದ ಆರ್ಭಟ ಅದು ಬಂದಾದ ಮೇಲೆ ಮಾಯವಾಗಿತ್ತು. 2014 ರಲ್ಲಿ ಮಾರ್ಚ್ 13ರಂದೇ ಪ್ರಧಾನಿ ಮೋದಿಯವರು (PM Narendra Modi) ತನಗೆ ಟಿಕೆಟ್ ನೀಡಿದ್ದರು. 2019 ರಲ್ಲಿ ಪುನಃ ಟಿಕೆಟ್ ನೀಡಿ ಒಟ್ಟು 10 ವರ್ಷಗಳ ಕಾಲ ಕೊಡಗು-ಮೈಸೂರು (Kodagu-Mysuru) ಜನರ ಸೇವೆ ಮಾಡುವ ಅವಕಾಶ ಕಲ್ಪಿಸಿದರು. ಅವರು ಅವಕಾಶ ನೀಡಿರದಿದ್ರೆ ತಾನು ಇಷ್ಟೆಲ್ಲ ಕೆಲಸ ಮಾಡಬಲ್ಲೆ ಅನ್ನೋದು ಜನರಿಗೆ ಗೊತ್ತಾಗುತ್ತಿರಲಿಲ್ಲ, ಈ ಬಾರಿ ಟಿಕೆಟ್ ಸಿಗುತ್ತೋ ಇಲ್ಲವೋ ಗೊತ್ತಿಲ್ಲ, ಇನ್ನೊಂದು ಅವಧಿಗೆ ಸೇವೆ ಮಾಡುವ ಅವಕಾಶ ಕೊಡಿ ಅಂತ ಮನವಿ ಮಾಡಿದ್ದೆ, ಮೂರನೇ ಅವಧಿಯಲ್ಲಿ ಯುವಕರನ್ನು ಬೆಳೆಸಿ ರಾಜಕೀಯಕ್ಕೆ ವಿದಾಯ ಹೇಳಬೇಕೆಂದುಕೊಂಡಿದ್ದೆ, ಕೊನೆಯವರೆಗೂ ರಾಜಕಾರಣಿಯಾಗಿ ಉಳಿಯುವುದು ತನಗೆ ಇಷ್ಟವಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು. ದೇಶಕ್ಕೆ ಮೋದಿ ಜೀ ಅವರು ಬೇಕು, ಹಾಗಾಗಿ ಮೈಸೂರು ಮಹಾರಾಜರಿಗೆ ಟಿಕೆಟ್ ಕೊಟ್ಟರೆ ಎಲ್ಲ ಕಾರ್ಯಕರ್ತರು ಒಟ್ಟಾಗಿ ಅವರ ಗೆಲುವಿಗೆ ಶ್ರಮಿಸಬೇಕು, ತಾನಂತೂ ನಿರಾಶನಾಗಲ್ಲ, ಮೊದಲಿನಂತೆಯೇ ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ಸಂಸದ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಿ.ಸೋಮಣ್ಣ ಪರ ನಿಂತಿದ್ದೇ ಪ್ರತಾಪ್ ಸಿಂಹಗೆ ಮುಳುವಾಯ್ತಾ? ಲೋಕಸಭಾ ಟಿಕೆಟ್ ಕೈತಪ್ಪಲು ಕಾರಣವೇನು?