ಮೈಸೂರು: ಟಿಕೆಟ್ ಕೈತಪ್ಪುವ ವದಂತಿ ಬೆನ್ನಲ್ಲೇ ಪ್ರತಾಪ್ ಸಿಂಹ ಅಚ್ಚರಿಯ ಹೇಳಿಕೆ

ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಿದೆ ಎಂಬ ವದಂತಿಗಳ ಬೆನ್ನಲ್ಲೇ ಅವರು ಆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಸದ್ಯ ಬಿಜೆಪಿ ವಲಯದಲ್ಲಿ ಚಾಲ್ತಿಯಲ್ಲಿರುವ ವದಂತಿಗೂ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗಳಿಗೂ ವ್ಯತ್ಯಾಸವಿದೆ. ಹಾಗಿದ್ದರೆ ಟಿಕೆಟ್ ಬಗ್ಗೆ ಏನೆಂದರು ಹಾಲಿ ಸಂಸದ? ಇಲ್ಲಿದೆ ನೋಡಿ.

ಮೈಸೂರು: ಟಿಕೆಟ್ ಕೈತಪ್ಪುವ ವದಂತಿ ಬೆನ್ನಲ್ಲೇ ಪ್ರತಾಪ್ ಸಿಂಹ ಅಚ್ಚರಿಯ ಹೇಳಿಕೆ
ಪ್ರತಾಪ್ ಸಿಂಹ
Follow us
| Updated By: ಗಣಪತಿ ಶರ್ಮ

Updated on: Mar 11, 2024 | 2:06 PM

ಮೈಸೂರು, ಮಾರ್ಚ್​ 11: ಪಕ್ಷ ನನ್ನನ್ನು ಕೈಬಿಡುವುದಿಲ್ಲ ಎಂಬ ಅಚಲ ನಂಬಿಕೆ ಇದೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು. ಲೋಕಸಭೆ ಚುನಾವಣೆಗೆ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ (BJP) ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂಬ ವರದಿಗಳ ಬೆನ್ನಲ್ಲೇ ಅವರು ಪ್ರತಿಕ್ರಿಯೆ ನೀಡಿದರು. ಮೈಸೂರು ರಾಮೇಶ್ವರಂ ರೈಲಿಗೆ (Mysuru Rameshwaram Train) ಮೈಸೂರಿನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಮೇಲೆ ಪ್ರೀತಿ ಇಟ್ಟು ಇಲ್ಲಿಯ ಜನ ಗೆಲ್ಲಿಸಿದ್ದಕ್ಕೆ ಇಷ್ಟೆಲ್ಲ ಮಾಡಿದ್ದೇನೆ. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿದ್ದೇನೆ ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುವ ಬಗ್ಗೆ ಭರವಸೆ ಇದೆ. ಆದರೆ ಅಂತಿಮವಾಗಿ ಪಕ್ಷದ ಹೈಕಮಾಂಡ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಇಂದು ಪ್ರತಾಪ್ ಸಿಂಹ ಹೇಳಿದರು.

ನಾನು ಮೊದಲನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತಯಾಚನೆ ಮಾಡಿದ್ದೆ. ಎರಡನೇ ಬಾರಿ ಸ್ಪರ್ಧಿಸುವಾಗಲು ಮೋದಿ ಹೆಸರಿನಲ್ಲಿಯೇ ಸ್ಪರ್ಧಿಸಿದ್ದೆ. ಮೂರನೇ ಬಾರಿಯೂ ಮೋದಿ ಹೆಸರಿನಲ್ಲೇ ಚುನಾವಣೆ ಎದುರಿಸಿ ಜಯಗಳಿಸುತ್ತೇನೆ. ಪಕ್ಷದ ವಿಶ್ವಾಸ ನನ್ನ ಮೇಲಿದೆ. ನನಗೆ ಮತ್ತೆ ಅವಕಾಶ ಸಿಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ನಾನು ಏನೆಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿದೆ. ಸೋಲುವ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ವಿಚಾರದಲ್ಲಿ ಹೊಡೆದಾಟ ನಡೆಯುತ್ತಿದೆ. ಬಿಜೆಪಿಯಲ್ಲಿ ಗೆಲುವಿನ ಪೈಪೋಟಿ ಇರಬಾರದು ಎಂದರೆ ಹೇಗೆ? ಗೆಲ್ಲುವ ಕುದುರೆ ಎಲ್ಲರೂ ಪ್ರಯತ್ನ ಮಾಡುತ್ತಿರುತ್ತಾರೆ. ಮೈಸೂರಿನಲ್ಲಿ ಬಿಜೆಪಿ ಗೆಲ್ಲುವಂತ ಪರಿಸ್ಥಿತಿಯನ್ನು ನಾನು ಸೃಷ್ಟಿ ಮಾಡಿದ್ದೇನೆ. ನನಗೆ ತಾಯಿ ಚಾಮುಂಡಿ, ಪ್ರಧಾನಿ ಮೋದಿ ಆಶೀರ್ವಾದವಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ನಾನೇನೆಂಬುದು ಮೋದಿಗೆ ಗೊತ್ತಿದೆ: ಪ್ರತಾಪ್ ಸಿಂಹ

ಈ ಬಾರಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ದೊರೆಯುವುದಿಲ್ಲ. ಅವರ ಬದಲಿಗೆ ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಒಡೆಯರ್ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ ಎಂಬ ವರದಿಗಳ ಬೆನ್ನಲ್ಲೇ ಮೈಸೂರು ಸಂಸದರು ಈ ಮೇಲಿನ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ವಿ.ಸೋಮಣ್ಣ ಪರ ನಿಂತಿದ್ದೇ ಪ್ರತಾಪ್ ಸಿಂಹಗೆ ಮುಳುವಾಯ್ತಾ? ಲೋಕಸಭಾ ಟಿಕೆಟ್ ಕೈತಪ್ಪಲು ಕಾರಣವೇನು?

ಮತ್ತೊಂದೆಡೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಸಚಿವ ವಿ ಸೋಮಣ್ಣ ಪರ ನಿಂತಿದ್ದಕ್ಕೆ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂಬ ಊಹಾಪೋಹ ಕೇಳಿ ಬರುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗಾಗಿ ಪಕ್ಷದ ನಾಯಕರು ದೆಹಲಿಗೆ ತೆರಳಿದ್ದಾರೆ. ಇಂದು ಸಂಜೆ ನಡೆಯಲಿರುವ ಚುನಾವಣಾ ಸಮಿತಿ ಸಭೆಯಲ್ಲಿ ಎರಡನೇ ಪಟ್ಟಿ ಅಂತಿಮ ಗೊಳ್ಳುವ ನೀರಿಕ್ಷೆ ಇದೆ. ಜೊತೆಗೆ ಕರ್ನಾಟಕದ ಅಭ್ಯರ್ಥಿಗಳ ಬಗ್ಗೆಯೂ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಸಾಧ್ಯತೆ ಇದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್