ಕೋಲಾರ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ಕೋಲಾರ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on:Mar 15, 2024 | 5:44 PM

ಜೆಡಿಎಸ್ ಒಂದು ಚಿಕ್ಕ ಪ್ರಾದೇಶಿಕ ಪಕ್ಷವಾದರೂ ಜನರ ಬೆಂಬಲ ಮತ್ತು ಕಾರ್ಯಕರ್ತರ ಶ್ರಮದಿಂದ ಅಸ್ತಿತ್ವ ಉಳಿಸಿಕೊಂಡಿದೆ, ದೇವೇಗೌಡರು ಕಟ್ಟಿದ ಪಕ್ಷವನ್ನು ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸಲು ಸಾಕಷ್ಟು ದೇಹದಂಡನೆ ಮಾಡಿಕೊಂಡಿದ್ದೇನೆ ಆದರೆ ಜನರ ನೆರವಿನಿಂದ ಇನ್ನೂ 17 ವರ್ಷಗಳ ಕಾಲ ಮುನ್ನಡೆಸುವ ಕ್ಷಮತೆ ಮತ್ತು ಸಾಮರ್ಥ್ಯ ತಮ್ಮಲ್ಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಹಾಸನ: ನಗರದಲ್ಲಿಂದು ಜೆಡಿಎಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತಾಡುವಾಗ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಲೋಕಸಭಾ ಚುನಾವಣೆಗಾಗಿ (Lok Sabha Polls) ಬಿಜೆಪಿ ತಮ್ಮ ಪಕ್ಷಕ್ಕೆ ಯಾವ್ಯಾವ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ ಅನ್ನೋದನ್ನು ಬಹಿರಂಗಗೊಳಿಸಿದರು. ಅವರು ಹೇಳುವ ಪ್ರಕಾರ ಮಂಡ್ಯ (Mandya), ಕೋಲಾರ (Kolar) ಮತ್ತು ಹಾಸನ (Hassan) ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ಚುನಾವಣೆಯು ಜೆಡಿಎಸ್ ಪಕ್ಷಕ್ಕೆ ಸತ್ವಪರೀಕ್ಷೆಯಾಗಿದೆ ಎಂದ ಕುಮಾರಸ್ವಾಮಿ, ಮೂರು ಕ್ಷೇತ್ರಗಳ ಜೊತೆಗೆ ಇನ್ನೆರಡು ಕ್ಷೇತ್ರಗಳನ್ನು ಕೊಟ್ಟರೂ ಸ್ಪರ್ಧೆಗೆ ಕ್ಯಾಂಡಿಡೇಟ್ ಗಳು ತಮ್ಮಲ್ಲಿದ್ದಾರೆ ಎಂದು ಹೇಳಿದರು. ಪಕ್ಷದ ಸಂಘಟನೆ ಬಗ್ಗೆ ಮಾತಾಡಿದ ಅವರು, ಕಳೆದ 17 ವರ್ಷಗಳಿಂದ ಏಕಾಂಗಿಯಾಗಿ ಪಕ್ಷವನ್ನು ಮುನ್ನಡೆಸುತ್ತಿರುವುದಾಗಿ ಹೇಳಿದರು. ಜೆಡಿಎಸ್ ಒಂದು ಚಿಕ್ಕ ಪ್ರಾದೇಶಿಕ ಪಕ್ಷವಾದರೂ ಜನರ ಬೆಂಬಲ ಮತ್ತು ಕಾರ್ಯಕರ್ತರ ಶ್ರಮದಿಂದ ಅಸ್ತಿತ್ವ ಉಳಿಸಿಕೊಂಡಿದೆ, ದೇವೇಗೌಡರು ಕಟ್ಟಿದ ಪಕ್ಷವನ್ನು ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸಲು ಸಾಕಷ್ಟು ದೇಹದಂಡನೆ ಮಾಡಿಕೊಂಡಿದ್ದೇನೆ ಆದರೆ ಜನರ ನೆರವಿನಿಂದ ಇನ್ನೂ 17 ವರ್ಷಗಳ ಕಾಲ ಮುನ್ನಡೆಸುವ ಕ್ಷಮತೆ ಮತ್ತು ಸಾಮರ್ಥ್ಯ ತಮ್ಮಲ್ಲಿದೆ ಎಂದು ಕುಮಾರಸ್ವಾಮಿ ಹೇಳಿದರು. ಬಿಜೆಪಿ ಮೈತ್ರಿ ಬೆಳೆಸಿದ ಕಾರಣವನ್ನೂ ಸೂಕ್ಷ್ಮವಾಗಿ ಹೇಳಿದ ಅವರು ಚುನಾವಣೆಯನ್ನು ನಡೆಸುವ ಶಕ್ತಿ ತನ್ನಲ್ಲಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಡಿಕೆ ಸಹೋದರರನ್ನು ಕಿರಾತಕ ಎಂದಿದ್ದಕ್ಕೆ ಇಕ್ಬಾಲ್ ಹುಸೇನ್ ಕಿಡಿ: ಜೆಡಿಎಸ್, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ

Published on: Mar 13, 2024 04:39 PM